ನಮ್ಮೂರುಮೈಸೂರು

ಚಾಮುಂಡಿ ಬೆಟ್ಟದಲ್ಲಿ ‘ನಿರ್ಮಲ ಸೌಲಭ್ಯ’ ಸಚಿವ ಡಾ.ಹೆಚ್.ಸಿ.ಮಹದೇವಪ್ಪರಿಂದ ಉದ್ಘಾಟನೆ

inau-ns-3ನಿರ್ಮಲ ಸೌಲಭ್ಯ ನಗರದ ‘ಮೊದಲ ಹಸಿರು’ ಶೌಚಾಲಯವಾಗಿದ್ದು ಸಂರ್ಪೂಣ ಪ್ರಕೃತಿ ಸ್ನೇಹಿಯಾಗಿವೆ. ಮಹಿಳೆಯರಿಗೆ 15, ಪುರುಷರಿಗೆ 16, ವಿಕಲಚೇತನರಿಗೆ ಹಾಗೂ ಹಾಲುಣ್ಣಿಸುವ ತಾಯಂದಿರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸೌರಶಕ್ತಿಯಿಂದ ಉತ್ತಮ ಬೆಳಕು, ದಿನದ ಎಲ್ಲಾ ಸಮಯದಲ್ಲಿಯೂ ನೀರು, ಶುದ್ಧ ಗಾಳಿ ಹಾಗೂ ಮಳೆ ನೀರು ಕೊಯ್ಲಿಗೂ ವಿಶೇಷ ಗಮನಹರಿಸಲಾಗಿದೆ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಲಾಗುವ ಘಟಕವನ್ನು ಸ್ಥಾಪಿಸಲಾಗಿದ್ದು ಇದರಿಂದ ನೀರು ಪೋಲಾಗುವುದನ್ನು  ತಡೆಯಲಾಗುವುದು ಎಂದು ಮೈಸೂರಿನ ಸಿಐಐ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್ ತಿಳಿಸಿದರು.

ಅವರು ಇಂದು (ಅ.3) ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ನಗರದ ಇಂಡಿಯಾ ಇನ್ಷಿಟೆಟಿವ್ ಆಫ್ ಸಿಐಐ ಮತ್ತು ಆಟೋಮೊಟಿವ್ ಅಕ್ಸಿಲ್ಸ್ ಲಿಮಿಟೆಡ್ ನ ನೆರವಿನೊಂದಿಗೆ ಸಾರ್ವಜನಿಕರಿಗಾಗಿ ಒಂದು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ ‘ನಿರ್ಮಲ ಸೌಲಭ್ಯ’ ಸಾರ್ವಜನಿಕ ಶೌಚಾಲಯದ ಉದ್ಘಾಟನೆಯ ವೇಳೆ ಮಾತನಾಡಿ ಕಟ್ಟಡವು ಸಂರ್ಪೂಣ ಪ್ರಕೃತಿ ಸ್ನೇಹಿಯಾಗಿದ್ದು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಕಳೆದ ವಾರದ ಪರಿಶೀಲನೆ ನಡೆಸಿ ‘ಹಸಿರು ಶೌಚಾಲಯ’ ಪ್ರಮಾಣ ಪತ್ರ ನೀಡಿದೆ. ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟಕ್ಕೆ ಪ್ರತಿ ಗಂಟೆಗೆ 6 ನೂರರಿಂದ 2 ಸಾವಿರ ಭಕ್ತರು ಆಗಮಿಸುವರು. ಅವರ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ನಿರ್ಮಿಸಲಾಗಿದ್ದು ‘ನಿರ್ಮಲಾ ಸೌಲಭ್ಯ’ವು  ಸ್ವಚ್ಚ ಭಾರತ ಆಂದೋಲನಕ್ಕೆ ಸಂಕೇತಿಕ ಕೊಡುಗೆಯಾಗಿದ್ದು ಇದು ವಿನೂತನ ಪ್ರಯೋಗವಾಗಿದ್ದು ರಾಜ್ಯ ಸರ್ಕಾರದ ಸಹಯೋಗದಲ್ಲಿ ಮೈಸೂರನ್ನು ಪ್ರವಾಸಿ ಸ್ನೇಹಿ ಮೈಸೂರನ್ನಾಗಿಸಲು ಇನ್ನೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶೌಚಾಲಯದ ಸ್ವಚ್ಛತೆಗಾಗಿ 8 ಜನರನ್ನು ನೇಮಿಸಲಾಗಿದೆ. ರೂ.2 ಹಾಗೂ ರೂ.4ನ್ನು ದರ ನಿಗದಿಪಡಿಸಿಲಿದ್ದು ಸಂಗ್ರಹವಾದ ಹಣವನ್ನು ಶೌಚಾಲಯದ ನಿರ್ವಹಣೆಗೆ ಬಳಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಇತರೆ ಪ್ರವಾಸಿತಾಣಗಳಾದ ಹಂಪಿ, ಬಾದಾಮಿ, ಬಂಡೀಪುರ, ಕೊಡಗು ಮತ್ತು ಶ್ರವಣಬೆಳಗೊಳದಲ್ಲಿಯೂ ಈ ಯೋಜನೆ ವಿಸ್ತರಿಸಬೇಕು. ಪ್ರವಾಸಿತಾಣಗಳಲ್ಲಿ ಸ್ವಚ್ಛ  ಶೌಚಾಲಯಗಳ ಅವಶ್ಯವಿದ್ದು ಬೆಟ್ಟದಲ್ಲಿ ಉದ್ಘಾಟನೆಯಾದ ‘ನಿರ್ಮಲ ಸೌಲಭ್ಯ’ವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಬೆಂಗಳೂರಿನ ಪ್ರವಾಸಿ ರಾಮ ರಾವ್ ಹರ್ಷ ವ್ಯಕ್ತ ಪಡಿಸಿದರು.

 

 

Leave a Reply

comments

Related Articles

error: