
ಮೈಸೂರು
ಭಾರೀ ಮಳೆಗೆ ಧರೆಗುರುಳಿದ ಮರ : ಸಂಚಾರಕ್ಕೆ ಅಡ್ಡಿ
ಮೈಸೂರು,ಮೇ.24:- ಕೆ.ಆರ್.ನಗರದಲ್ಲಿ ತಡರಾತ್ರಿ ಗಾಳಿ, ಗುಡುಗು- ಮಿಂಚು ಸಹಿತ ಸುಮಾರು 2 ಗಂಟೆ ನಿರಂತರವಾಗಿ ಧಾರಾಕಾರ ಮಳೆಯಾಗಿದೆ.
ಗಾಳಿಯ ರಭಸಕ್ಕೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಮೈಸೂರು – ಕೆ.ಆರ್.ನಗರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, 2 ಭಾರಿ ಗಾತ್ರದ ಮರಗಳು ಹಾಗೂ 7ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಯಾವುದೇ ಅಪಾಯ ಸಂಭವಿಸಿಲ್ಲ. ರಸ್ತೆಯಲ್ಲಿಯೇ ಮರ ಮುರಿದು ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ವಿದ್ಯುತ್ ವ್ಯತ್ಯಯಗೊಂಡಿದೆ. ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)