ಮೈಸೂರು

ವಿಜಯಧ್ವನಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ: ಮೇ 26 ರಂದು

ಮೈಸೂರು, ಮೇ 24: ಮೈಸೂರಿನ ನೂತನ ಸಾಂಸ್ಕೃತಿಕ ಸಂಸ್ಥೆಯಾದ ವಿಜಯಧ್ವನಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವನ್ನು ಮೇ 26 ರಂದು ಸಂಜೆ 5 ಗಂಟೆಗೆ ಜೆ.ಎಲ್.ಬಿ.ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಆರ್.ಸಿ.ರಾಜಲಕ್ಷ್ಮಿ ತಿಳಿಸಿದರು.

ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ರಂಗಭೂಮಿಯ ಚಟುವಟಿಕೆಗಳನ್ನು ಉತ್ತೇಜಿಸುವುದು, ಸಮಾಜಮುಖಿಯಾಗಿ ಹೊಸ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಹೊಸ ರಂಗ ಪ್ರತಿಭೆಗಳನ್ನು ಬೆಳಕಿಗೆ ತರುವುದು , ಹೊಸ ನಾಟಕಗಳ ಪ್ರಯೋಗ, ಪಾರಂಪರಿಕ ರಂಗಭೂಮಿಯ ಕುರಿತು ವಿಚಾರ ಸಂಕಿರಣ, ಸಾಹಿತ್ಯ ಕಾರ್ಯಕ್ರಮ ಹೀಗೆ ಸಾಂಸ್ಕೃತಿಕ ವಲಯದ ಹಲವು ಮಗ್ಗುಲುಗಳನ್ನು ತಲುಪುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಮಾರಂಭವನ್ನು ಖ್ಯಾತ ಅಂಕಣಕಾರ ಹಾಗೂ ಸಾಂಸ್ಕೃತಿಕ ಚಿಂತಕ ಗುಬ್ಬಿಗೂಡು ರಮೇಶ್ ಉದ್ಘಾಟಿಸಿಲಿದ್ದಾರೆ. ಕುಂದಾಪುರದ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ವಸಂತ ಬನ್ನಾಡಿ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಕರಾಮುವಿ ಸಹಾಯಕ ಪ್ರಾಧ್ಯಾಪಕಿ ಕವಿತಾ ರೈ, ವಿಜಯವಾಣಿ ದಿನಪತ್ರಿಕೆಯ ಹಿರಿಯ ಸಂಪಾದಕರಾದ ಮಂಜುನಾಥ್ ಲತಾ ಅವರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ನಂತರ ಎಸ್.ಸುಶ್ಮಿತರಾಣಿ, ಸೌಮ್ಯ ಮತ್ತು ಸೌಜನ್ಯ ಅವರಿಂದ ಭರತನಾಟ್ಯ, ಎಂ.ಸುಷ್ಮಾ ಇವರಿಂದ ಕುಂಚಕಲಾ ಚಿತ್ರಪ್ರದರ್ಶನ, ಆರ್.ಸಿ.ರಾಜಲಕ್ಷ್ಮಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಾಲಕೃಷ್ಣ ಮತ್ತು ವೃಂದದವರು ಹಿನ್ನೆಲೆ ಸಂಗೀತ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಟ್ರಸ್ಟಿಗಳಾದ ಬಿ.ಪಿ.ಚೆಲುವಾಚಾರ್, ಆರ್.ಸಿ.ಅಶೋಕ, ವಸಂತ್ ಬನ್ನಾಡಿ, ಊರ್ಮಿಳಮ್ಮ, ಸುಶ್ಮಿತ ಹಾಜರಿದ್ದರು. (ವರದಿ: ಎಲ್.ಜಿ)

Leave a Reply

comments

Related Articles

error: