ಮನರಂಜನೆ

ಪ್ರಿಯಾಮಣಿಗೆ ಡಬಲ್ ಧಮಾಕಾ

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿಗೆ ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಡಬಲ್ ಧಮಾಕ. ಇವರ ಅಭಿನಯದ ‘ದನ ಕಾಯೋನು’ ಮತ್ತು ‘ಇದೊಳ್ಳೆ ರಾಮಾಯಣ’ ಸಿನಿಮಾಗಳು ತೆರೆಕಾಣುತ್ತಿವೆ.

ಯೋಗ್‌ರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದರೆ, ಬಹುಭಾಷಾ ನಟ  ಪ್ರಕಾಶ್ ರೈ ಡೈರೆಕ್ಷನ್ನಿನ ಇದೊಳ್ಳೆ ರಾಮಾಯಣದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದುಕಡೆ ಯೋಗರಾಜ್ ಭಟ್ ಮತ್ತೊಂದು ಕಡೆ ಪ್ರಕಾಶ್ ರೈ ರಂತಹ ಹೆಸರುಗಳಿಸಿರುವ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಪ್ರಿಯಾಮಣಿಗೆ ಎರಡು ಚಿತ್ರಗಳು ವಿಭಿನ್ನ ಅನುಭವ ನೀಡಿದೆಯಂತೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್ ಮಟ್ಟಿಗೆ ಒಂದೇ ನಾಯಕಿಯ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ತೀರಾ ವಿಶೇಷವಾಗಿ ಕಾಣುತ್ತಿದೆ.

Leave a Reply

comments

Related Articles

error: