ಸುದ್ದಿ ಸಂಕ್ಷಿಪ್ತ

ಕೃತಿ ಬಿಡುಗಡೆ ಸಮಾರಂಭ

ಮೈಸೂರು, ಮೇ 24: ಡಿ.ಎ.ಶಂಕರ್ ಅವರ ಸಮಗ್ರ ನಾಟಕ ಸಂಪುಟ ಕೃತಿ ಲೋಕಾರ್ಪಣೆ ಸಮಾರಂಭವು ಮೇ 27 ರಂದು ಬೆ.11 ಗಂಟೆಗೆ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆಯಲಿದೆ.

ಲೋಕಸಭಾ ಸದಸ್ಯ ಎಂ.ವೀರಪ್ಪಮೊಯಿಲಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಾಟಕ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ ಕೃತಿ ಕುರಿತು ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ವಾಸು ಉಪಸ್ಥಿತರಿರುತ್ತಾರೆ. (ಎಲ್.ಜಿ)

Leave a Reply

comments

Related Articles

error: