ಮೈಸೂರು

ಮಳೆಗಾಲದ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧಗೊಂಡಿದೆ ಪಾಲಿಕೆ ಕಂಟ್ರೋಲ್ ರೂಂ

ಮೈಸೂರು,ಮೇ.24:- ಇನ್ನು ಮಳೆ ಬಂದರೆ ಮನೆಯಲ್ಲಿ ನೀರು ತುಂಬಿತು. ರಸ್ತೆಯಲ್ಲಿ ನೀರು ತುಂಬಿ ಹೋಗಕಾಗ್ತಿಲ್ಲ. ಯಾರಿಗೆ ಹೇಳೋದು ಎಂದು ಚಿಂತಿಸುವ ಅಗತ್ಯವಿಲ್ಲ.  ಯಾಕೆಂದರೆ ಮೈಸೂರು ಮಹಾನಗರ ಪಾಲಿಕೆ ಜನತೆಗೆ ಸಹಾಯ ಹಸ್ತ ಚಾಚಲು ಸಿದ್ಧವಾಗಿದೆ.

ಮಳೆಗಾಲದ ಸಮಸ್ಯೆ ಎದುರಿಸಲು ಪಾಲಿಕೆಯಲ್ಲಿ  ನೂತನ ಕಂಟ್ರೋಲ್ ರೂಂ ಸಿದ್ಧಪಡಿಸಲಾಗಿದ್ದು, ಇಂದಿನಿಂದ ಕಾರ್ಯಾರಂಭ ಮಾಡಲಿದೆ. 12ಜನರ ತಂಡದೊಂದಿಗೆ ಸಿದ್ಧಗೊಂಡ ನೂತನ ಕಂಟ್ರೋಲ್ ರೂಂ ಮೂರು ವಿಭಿನ್ನ ಶಿಫ್ಟ್ ಗಳಲ್ಲಿ ಕಾರ್ಯಾಚರಿಸಲಿದೆ. 14ಲಕ್ಷರೂ.ವೆಚ್ಚದಲ್ಲಿ ನೂತನ ಕಟ್ಟಡದಲ್ಲಿ ಕಾರ್ಯಾರಂಭಕ್ಕೆ ಚಾಲನೆ ದೊರಕಿದೆ. ಮಳೆಗಾಲದ ಯಾವುದೇ ರೀತಿಯ ಸಮಸ್ಯೆಗಳಿಗೆ ಜನತೆಗೆ  ಸ್ಪಂದಿಸಲಿದೆ ಎಂದು ಪಾಲಿಕೆಯ ಮೂಲಗಳು ಸಿಟಿಟುಡೆಗೆ ತಿಳಿಸಿವೆ.ಇದಕ್ಕಾಗಿ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ನಂಬರ್ ಗಳು ಇಂತಿವೆ. 1913,  2418800,  2418816  ಈ ಸಂಬರ್ ಗಳಿಗೆ ಕರೆ ಮಾಡಿ ತಿಳಿಸಬಹುದು. (ವರದಿ:ಎಸ್.ಎನ್,ಎಸ್.ಎಚ್)

 

Leave a Reply

comments

Related Articles

error: