ನಮ್ಮೂರುಮೈಸೂರು

ಮೈಸೂರು ಜನತೆಗೆ ತಂಪೆರೆದ ಮಳೆರಾಯ

ಮಳೆಗಾಲದಲ್ಲಿಯೂ ಸರಿಯಾಗಿ ಮಳೆ ಬಾರದೇ ನೆನಪಾದಾಗಲೊಮ್ಮೆ ತನ್ನ ದರ್ಶನ ನೀಡಿದ್ದ ಮಳೆರಾಯ ಇದೀಗ ದಸರಾ ಉತ್ಸವ ಸಮಯದಲ್ಲಿ ಮತ್ತೆ ಆಗಮಿಸಿದ್ದು,  ಮೈಸೂರು ಜನತೆಗೆ ಸೋಮವಾರ ಸಾಯಂಕಾಲ ಮಳೆಯನ್ನು ಸುರುಸಿ ತಂಪೆರೆದಿದ್ದಾನೆ.

ಸಾಂಸ್ಕೃತಿಕ ನಗರಿಯಲ್ಲಿ ದಸರಾ ಉತ್ಸವದ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ನಗರದ ವಿವಿಧೆಡೆ ನಡೆಯುತ್ತಿರುವ ಹಲವಾರು ಸಾಂಸ್ಕೃತಿಕ ಸಮ್ಮೇಳನಗಳು, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಪುಷ್ಪ  ಪ್ರದರ್ಶನ, ಸೋಮವಾರವಷ್ಟೇ ಉದ್ಘಾಟನೆಗೊಂಡ ಲಲಿತಕಲಾ ಪ್ರದರ್ಶನ, ಆಹಾರ ಮೇಳಗಳಿಗೆ ಸಾಗುತ್ತಿದ್ದ ಹಾಗೂ ಕಚೇರಿ ಬಿಟ್ಟು ಮನೆಗೆ ತೆರಳುತ್ತಿದ್ದ ಜನರು ಮಳೆಗಾಗಿ ಯಾವುದೇ ಸಿದ್ಧತೆ ಮಾಡಿಕೊಂಡು ಬಂದಿಲ್ಲದ ಕಾರಣ ಕೆಲ ಕಾಲ ಮರ ಹಾಗೂ ಎದುರಿಗೆ  ಸಿಕ್ಕ ಅಂಗಡಿ-ಮುಂಗಟ್ಟುಗಳ ಮುಂಭಾಗ  ನಿಂತು ಆಶ್ರಯ ಪಡೆಯುತ್ತಿರುವುದು ಕಂಡು ಬಂತು. ಹವಾಮಾನ ಇಲಾಖೆ ಈ ಮೊದಲೇ ಜಿಲ್ಲೆಯಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ಸಾಧಾರಣ ಮಳೆ ಸಾಧ್ಯತೆ ಎಂದು ತಿಳಿಸಿತ್ತು. ಅದರಂತೆ ಸೆಪ್ಟೆಂಬರ್ 3ಕ್ಕೆ ಮಳೆಯ ಆಗಮನವಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೈಸೂರಿನಲ್ಲಿ ಮಳೆ ಬಿದ್ದಿದೆ. ಸಾಯಂಕಾಲ ಸುಮಾರು 5ಗಂಟೆಯಿಂದ ಆರಂಭಗೊಂಡ ಮಳೆ ಒಂದು ಗಂಟೆಯವರೆಗೂ ಸುರಿದಿದ್ದು ಇಲ್ಲಿನ ಜನತೆಗೆ ತಂಪೆರೆದಿದೆ.

Leave a Reply

comments

Related Articles

error: