ಕರ್ನಾಟಕಪ್ರಮುಖ ಸುದ್ದಿ

ದಲಿತರ ಉದ್ಧಾರಕ್ಕೆ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ : ಯಡಿಯೂರಪ್ಪ ಹೇಳಿಕೆ

ಪ್ರಮುಖಸುದ್ದಿ, ರಾಜ್ಯ(ಹುಬ್ಬಳ್ಳಿ) ಮೇ.25:- ಬಿಎಸ್ ಯಡಿಯೂರಪ್ಪ ನೇತೃತ್ವದ ಜನಸಂಪರ್ಕ ಯಾತ್ರೆ ಹುಬ್ಬಳ್ಳಿ ತಲುಪಿದೆ. ಹುಬ್ಬಳ್ಳಿಗೆ ಆಗಮಿಸಿದ ಬಿ ಎಸ್ ಯಡಿಯೂರಪ್ಪ  ಹುಬ್ಬಳ್ಳಿಯ ಕರಕೀ ಬಸವೇಶ್ವರ ನಗರದ ದಲಿತ ರೇಣುಕಪ್ಪ ಕೇಲೂರು ನಿವಾಸಕ್ಕೆ ಆಗಮಿಸಿ ಮನೆಯಲ್ಲಿ  ಉಪಹಾರ ಸೇವಿಸಿದರು.  ರೇಣುಕಪ್ಪ ಕೆಲೂರ ಮನೆಯಲ್ಲಿ ತಯಾರಿಸಿದ ಅವಲಕ್ಕಿ, ಉಪ್ಪಿಟ್ಟು ಹಾಗೂ ಕೇಸರಿಬಾತ್ ಸೇವಿಸಿದರು. ಬಿ ಎಸ್ ಯಡಿಯೂರಪ್ಪ ಅವರಿಗೆ ಸಿಟಿ ರವಿ, ಗೋವಿಂದ ಕಾರ್ಜೋಳ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಶಿ ಸಾಥ್ ನೀಡಿದರು.

ಕರಕೀ ಬಸವೇಶ್ವರ ನಗರದ ದಲಿತ ರೇಣುಕಪ್ಪ ಕೇಲೂರು ನಿವಾಸಕ್ಕೆ ಬಿ ಎಸ್ ಯೀಯೂರಪ್ಪ ಆಗಮಿಸುವ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕರಕೀ ಬಸವೇಶ್ವರ ನಗರವನ್ನು ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ಬಿ ಎಸ್ ವೈ ಅವರನ್ನು ಸುಮಂಗಲಿಯರು ಆರತಿ ಬೆಳಗುವ ಮೂಲಕ ಅದ್ದೂರಿ ಸ್ವಾಗತ ಮಾಡಿಕೊಂಡರು. ಇದಕ್ಕೂ ಮುನ್ನ ಯಡಿಯೂರಪ್ಪ ದುರ್ಗಾದೇವಿ  ದರ್ಶನ ಪಡೆದುಕೊಂಡರು. ಬಳಿಕ ಸಂವಾದ ನಡೆಸಿದ ಯಡಿಯೂರಪ್ಪ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿದೆ. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೆ ರಾಜ್‌ಘಾಟ್‌ನಲ್ಲಿ ಅವಕಾಶ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಮನೆಮನೆಗೆ ತಲುಪಿಸಬೇಕಾಗಿದೆ ಎಂದರು. ಇಡೀ ಜಗತ್ತೇ ಮೆಚ್ಚುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ದಲಿತರ ಉದ್ಧಾರಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಗಜೀವನ್‌ರಾಮ್ ಪ್ರಧಾನಿಯಾಗಲು ಕಾಂಗ್ರೆಸ್ ಬಿಡಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೀನ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ದಲಿತರ ಪರ ಕೆಲಸ ಮಾಡಿದೆ. ಸಿದ್ಧರಾಮಯ್ಯ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್,  ರಾಜ್ಯ ಕಾಂಗ್ರೆಸ್ ಸರ್ಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿಯಾಗಿದೆ. ಸಿದ್ದರಾಮಯ್ಯನವರು ಓಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ದಲಿತರ ಮನೆಯಲ್ಲಿ ಉಪಹಾರ ಮಾಡಿದರೆ ಅನವಶ್ಯಕವಾಗಿ ಟೀಕಿಸುತ್ತಿದ್ದಾರೆ ಎಂದು ಹರಿಯ್ದಾದರು. ಇದಾದ ಬಳಿಕ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಿಸ ಹಿನ್ನೆಲೆಯಲ್ಲಿ ಕಮಲ ಪಡೆ ನಾಯಕ ದಂಡೆ ಆಗಮಿಸಿದೆ. ಸಿಟಿ ರವಿ ಹಾಗೂ ಮಾಜಿ ಶಾಸಕ ಅಶೋಕ ಕಾಟ್ವೆ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರು. ಮಾಜಿ ಶಾಸಕ ಶಂಕರಪಾಟೀಲ್ ಮುನ್ನೆನಕೊಪ್ಪ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವೀರಣ್ಣ ಜಡ್ಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: