ಪ್ರಮುಖ ಸುದ್ದಿಮೈಸೂರು

ಪಕ್ಷ ತೊರೆಯುವ ಸನ್ನಿವೇಶ ಪಕ್ಷದಿಂದಲೇ ಸೃಷ್ಟಿಯಾಗುತ್ತಿದೆ: ಹೆಚ್.ವಿಶ್ವನಾಥ್ ಬೇಸರ

ಮೈಸೂರು, ಮೇ 25: ನಾನಿನ್ನು ಪಕ್ಷ ಬಿಟ್ಟಿಲ್ಲ. ಆದರೆ ಕಾಂಗ್ರೆಸ್ ನವರೆ ನಾನು ಪಕ್ಷ ತೊರೆಯಬೇಕಾದ ಸನ್ನಿವೇಶ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಗುರುವಾರ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಿನ್ನೂ ಪಕ್ಷದಲ್ಲೇ ಇದ್ದೇನೆ. ಎಲ್ಲಿಯೂ ಪಕ್ಷ ತೊರೆಯುವ ಮಾತುಗಳನ್ನಾಡಿಲ್ಲ. ಆದರೆ ಕಾಂಗ್ರೆಸ್ಸಿಗರೇ ನಾನು ಪಕ್ಷ ಬಿಡುವಂತೆ ಮಾಡುತ್ತಿದ್ದಾರೆ. ಪಕ್ಷದಿಂದ ನಡೆಯುವ ಯಾವ ಸಭೆಗೂ ನನಗೆ ಆಹ್ವಾನ ನೀಡುತ್ತಿಲ್ಲ. ಕೆಪಿಸಿಸಿ ಸ್ವಾಯತ್ತ ಸಂಸ್ಥೆಯಾಗಿದ್ದು ಮುಖ್ಯಮಂತ್ರಿಗಳಿಗೆ ಹಡ ಇಟ್ಟಿಲ್ಲ. ಮೈಸೂರು ಸಿದ್ದರಾಮಯ್ಯನವರಿಗೆ ಗಿರವಿಯಾಗಿಲ್ಲ. ವಿಶ್ವನಾಥ್ ಗೆ ಆಹ್ವಾನ ನೀಡದಿದ್ದರೂ ನಡೆಯುತ್ತದೆ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಪಕ್ಷದಿಂದ ನಡೆಯುವ ಸಭೆಗಳಲ್ಲಿ ನನ್ನ ವಿಷಯವನ್ನು ಚರ್ಚಿಸದಂತೆ ಸೂಚಿಸಿದ್ದಾರೆ. ಪಕ್ಷದ ಹಿರಿಯರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಪಕ್ಷ ತೊರೆಯುವ ಸನ್ನಿವೇಶ ಪಕ್ಷದಿಂದಲೇ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. (ವರದಿ: ಬಿ.ಎಂ,ಎಲ್.ಜಿ)

Leave a Reply

comments

Related Articles

error: