ಮೈಸೂರು

ವಾರ್ಡ್ ನಂ.30ಕ್ಕೆ ನಂದೀಶ್ ಪ್ರೀತಂ ಭೇಟಿ : ಪರಿಶೀಲನೆ

ಮೈಸೂರು,ಮೇ.25:- ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 30 ಕ್ಕೆ ನಗರ ಮತ್ತು ಪಟ್ಟಣ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಭೇಟಿ ನೀಡಿದರು. ನಗರದ ಮಂಜುನಾಥ್ ಪುರದಲ್ಲಿ  ವಾರ್ಡ್ ನಂ 30 ಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಅಲ್ಲಿನ ನಿವಾಸಿಗಳು ಮಕ್ಕಳಿಗೆ ಪ್ರತ್ಯೇಕ ಅಂಗನವಾಡಿ , ಒಳಚರಂಡಿ, ರಸ್ತೆ ಕಾಮಗಾರಿ ಸೇರಿದಂತೆ ಇನ್ನಿತರೇ ಸಮಸ್ಯೆಗಳನ್ನು ಹೇಳಿಕೊಂಡರು. ಇದೇ ಸಂದರ್ಭ ನಂದೀಶ್ ಪ್ರೀತಂ ಪತ್ರಕರ್ತರೊಂದಿಗೆ  ಮಾತನಾಡಿ   ಮಂಜುನಾಥ್ ಪುರದ ವ್ಯಾಪ್ತಿಗೆ ಬರುವ ವಾರ್ಡ್ ನಂ 30 ರಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇನ್ನೂ 15 ದಿನಗಳಲ್ಲಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಮತ್ತೆ ಮಕ್ಕಳಿಗಾಗಿ ಪ್ರತ್ಯೇಕ ಅಂಗನವಾಡಿ ನಿರ್ಮಾಣಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅದರ ನಿರ್ಮಾಣಕ್ಕೂ ಸಹ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು. ಪರೀಶಿಲನೆಯಲ್ಲಿ ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಹಾಜರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: