
ಕರ್ನಾಟಕಪ್ರಮುಖ ಸುದ್ದಿ
ವೃದ್ಧೆಯನ್ನು ಯಾಮಾರಿಸಿ ಚಿನ್ನಾಭರಣ ಕಳುವು
ರಾಜ್ಯ(ಮಂಡ್ಯ)ಮೇ.25:- ವೃದ್ಧೆಗೆ ಬ್ಯಾಂಕಿನಲ್ಲಿ ಹಣ ಕೊಡಿಸೋದಾಗಿ ನಂಬಿಸಿ ಕಳ್ಳನೋರ್ವ ಅವರ ಬಳಿ ಇದ್ದ ಆಭರಣ ದೋಚಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ವೃದ್ಧೆಗೆ ಪರಿಚಯವಾದ ಕಳ್ಳನೋರ್ವ ಸಿದ್ದರಾಮಯ್ಯ ನಮಗೆ ಮತ ಹಾಕಬೇಕೆಂದು ಬ್ಯಾಂಕಿನಿಂದ 20 ಸಾವಿರ ಹಣ ನೀಡುತ್ತಿದ್ದಾರೆ ನಿಮ್ಮ ಮೈಮೇಲಿರುವ ಚಿನ್ನ ನೋಡಿದರೆ ಹಣ ನೀಡಲ್ಲ ಬ್ಯಾಗಿನಲ್ಲಿರಿಸಿಕೊಳ್ಳಿ ಎಂದು ಯಾಮಾರಿಸಿ ವೃದ್ಧೆಯ ಚಿನ್ನದ ಸರ, ಎರಡು ಉಂಗುರ. ಓಲೆ, ತಾಳಿ, ಹದಿನೆಂಟು ಚಿನ್ನದ ಗುಂಡು ದೋಚಿದ್ದಾನೆ. ಮಂಡ್ಯದಲ್ಲಿರೋ ಇಂಡಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ತೋರಿಸಿ, ಬ್ಯಾಂಕಿನೆದುರೆ ಚಿನ್ನವನ್ನು ಎಗರಿಸಿದ್ದಾನೆ ಎನ್ನಲಾಗಿದೆ. ಮಂಡ್ಯ ತಾಲೂಕಿನ ಕೆಸ್ತೂರು ಗ್ರಾಮದ ಚಿಕ್ಕೊಳಮ್ಮ ಚಿನ್ನ ಕಳೆದುಕೊಂಡವರಾಗಿದ್ದಾರೆ.
ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)