ಸುದ್ದಿ ಸಂಕ್ಷಿಪ್ತ

ಖಾಸಗೀಕರಣ ನೀತಿ ವಿರೋಧಿಸಿ ಮುಷ್ಕರ : ವಿಮಾ ನೌಕರರ ಸಂಘದ ಬೆಂಬಲ

ಮೈಸೂರು.ಮೇ.25 : ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಮೇ.30ರಂದು ಬಿ.ಇ.ಎಂ.ಎಲ್ ನೌಕರರು ಕರೆ ನೀಡಿರುವ  ಹೋರಾಟ ಮತ್ತು ಮೈಸೂರು ಬಂದ್ ಗೆ ವಿಮಾ ನೌಕರರ ಸಂಘವೂ ಬೆಂಬಲ ಸೂಚಿಸಿದೆ.

ಬಿ.ಇ.ಎಂ.ಎಲ್ ಭಾರತದ ಪ್ರಮುಖ ರಕ್ಷಣಾ ವಲಯದ ಉದ್ದಿಮೆಯಾಗಿದ್ದು, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ/ಸ್ವದೇಶಿ ಬಂಡವಾಳಕ್ಕೆ ಆಹ್ವಾನ ನೀಡುವುದು ಅಪಾಯಕಾರಿ ಕ್ರಮವೆಂದು ಪರಿಗಣಿಸಲಾಗುವುದು. ಅಲ್ಲದೇ, ಭಾರತದ ಸಾರ್ವಜನಿಕ ವಲಯ ಮತ್ತು ಉದ್ದಿಮೆಗಳು ಉಳಿಯಬೇಕು ಎನ್ನುವ ಸ್ಪಷ್ಟ ತಿಳುವಳಿಕೆಯೊಂದಿಗೆ ವಿಮಾ ನೌಕರರು ಮುಷ್ಕರವನ್ನು ಬೆಂಬಲಸುತ್ತಿದ್ದು ದೇಶ ಪ್ರೇಮಿಗಳು ಆಂದೋಲನವನ್ನು ಬೆಂಬಲಿಸಬೇಕೆಂದು ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: