ಸುದ್ದಿ ಸಂಕ್ಷಿಪ್ತ

ದಿ.ಪಂ.ಕೆ.ಎಸ್.ಹಡಪದ ಸ್ಮರಣಾರ್ಥ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಮೇ.27ಕ್ಕೆ

ಮೈಸೂರು.ಮೇ.25 : ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ದಿ.ಪಂ.ಕೆ.ಎಸ್.ಹಡಪದ ಸ್ಮರಣಾರ್ಥ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪುರಸ್ಕಾರವನ್ನು ಇದೇ ಮೇ27ರ ಸಂಜೆ 5.30ಕ್ಕೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಆಯೋಜಿಸಲಾಗಿದೆ.

ಹಿರಿಯ ಸಂಗೀತಗಾರ ಡಾ.ಇಂದೂಧರ ನಿರೋಡಿ ಉದ್ಘಾಟಿಸುವರು. ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಅಧ್ಯಕ್ಷತೆ ವಹಿಸುವರು. ಕಲಬುರ್ಗಿಯ ಗುರುಮಾತೆ ಶಾಂತಬಾಯಿ ಕೆ.ಹಡಪದ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಗೀತ ವಿಮರ್ಶಕಿ ರಮಾ ಬೆಣ್ಣೂರ್, ಬಿ.ಪಿ.ಬಸವರಾಜ್, ವೀರಭದ್ರಯ್ಯ ಹಿರೇಮಠ ಹಾಗೂ ಇತರರು ಪಾಲ್ಗೊಳ್ಳುವರು.

ಪ್ರಸಕ್ತ ಸಾಲಿನ ಪಂ.ಕೆ.ಎಸ್.ಹಡಪದ ಪ್ರಶಸ್ತಿಯನ್ನು ಹಿರಿಯ ತಬಲ ವಾದಕ ಪಂ.ರವೀಂದ್ರ ಯಾವಗಲ ಅವರಿಗೆ ನೀಡಿ ಸನ್ಮಾನಿಸಲಾಗುವುದು ಹಾಗೂ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: