ಮೈಸೂರು

ಲೈಟ್ ವಿಷಯಕ್ಕೆ ಹಲ್ಲೆ : ಮಹಿಳೆಯಿಂದ ದೂರು ದಾಖಲು

ಮೈಸೂರು,ಮೇ.25:-  ಮನೆಯ ಲೈಟ್ ವಿಷಯವಾಗಿ ಪಕ್ಕದವರು ನಮ್ಮ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ  ಎಂದು ಆರೋಪಿಸಿ ಮಹಿಳೆಯೋರ್ವರು ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಗ್ರಹಾರ ನಿವಾಸಿ ನಂದಕುಮಾರಿ ಎಂಬವರು  ನಮ್ಮ ಕುಲದ ಯಜಮಾನರಾದ ಅಶ್ವಥ್ ಮತ್ತು ದಾಸಿ ಮೇ.24ರಂದು  ಬೆಳಿಗ್ಗೆ 11-00 ಗಂಟೆಯಲ್ಲಿ ಮನೆಯ ಲೈಟನ್ನು ತೆಗೆಯುವಂತೆ ಹೇಳಿ ಹೋಗಿದ್ದು,  ಮಧ್ಯಾಹ್ನ 1ಗಂಟೆಗೆ ಪಕ್ಕದ ಮನೆಯ  ಪ್ರಭು ಮತ್ತವರ ಮಗ ಚೇತನ್ ಇಬ್ಬರು  ನನ್ನ ಮಗಳಿಗೆ ಮನೆಯ ಲೈಟ್  ವಿಷಯವಾಗಿ ಅವಾಚ್ಯ ಶಬ್ದಗಳಿಂದ  ಬೈಯ್ದು ನಿಂದಿಸಿದ್ದು ನನ್ನ ಕುತ್ತಿಗೆಗೆ ಕೈ ಹಾಕಿ ಎಳೆದಾಡಿ ಹಲ್ಲೆ ಮಾಡಿ ನನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿದಲ್ಲದೆ, ನನ್ನ ಮಗ ವಿನಯ್ ಮೇಲೆ ಚೇತನ್ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ, ದೇವಸ್ಥಾನಕ್ಕೆ ಸೇರಿದ ಮನೆಯಲ್ಲಿ ವಾಸಿಸುತ್ತಿರುವ ನಾವು ಕೆಲವು ದಿನಗಳ ಕಾಲಾವಕಾಶ ಕೇಳಿಕೊಂಡಿದ್ದರೂ  ಸಹ ಪ್ರತಿ ದಿನ ಮನೆಯ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದು ಪ್ರಭು ಎಂಬುವರು ನನ್ನ ಮಗ ವಿನಯ್ ಮೇಲೆ ಜೀವ ಬೆದರಿಕೆ  ಹಾಕಿರುತ್ತಾರೆಂದು  ದೂರು ನೀಡಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: