ನಮ್ಮೂರುಮೈಸೂರು

ಮೈಕ್ರೋಫೋನ್ ಕಳ್ಳನ ಬಂಧನ

ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸೆಪ್ಟೆಂಬರ್ 23ರಂದು ನಡೆದ ಯುವ ಸಂಭ್ರಮದಲ್ಲಿ 1.25ಲಕ್ಷರೂ.ಮೌಲ್ಯದ ಮೈಕ್ರೋಫೋನ್ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಜಯಲಕ್ಷ್ಮಿಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಹೊಸೂರು ಕಲ್ಲಳ್ಳಿ ಗ್ರಾಮದ ಸದ್ಯ ಶಾರದಾದಾವಿ ನಗರದಲ್ಲಿ ವಾಸಿಸುವ ಸೋಮಶೇಖರ ಕೆ.ಎಂದು ಹೇಳಲಾಗಿದೆ.

ಕಾರ್ಯಕ್ರಮಕ್ಕೆ ಈ ಮೈಕ್ರೋಫೋನ್ ನ್ನು ಬಾಡಿಗೆಗೆ ತರಲಾಗಿತ್ತು. ಕಾರ್ಯಕ್ರಮಕ್ಕೆ ಚ್ಯುತಿ ಬರಬಾರದೆನ್ನುವ ದೃಷ್ಟಿಯಲ್ಲಿ ಮಾಲಿಕರು ದೂರು ನೀಡಿರಲಿಲ್ಲ. ಶನಿವಾರ ಜಯಲಕ್ಷ್ಮಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸಿಸಿ ಟಿವಿ ಫೂಟೇಜ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಳಿಕ ಆತ ತನ್ನ ಮನೆಯಲ್ಲಿರಿಸಿದ್ದ ಮೈಕ್ರೋಫೋನ್ ನ್ನು ವಶಕ್ಕೆ ಪಡೆದಿದ್ದಾರೆ.

ಜಯಲಕ್ಷ್ಮಿಪುರ ಪೊಲೀಸ್ ಠಾಣೆಯ ಇನ್ಸ್ಫೆಕ್ಟರ್ ಸಿ.ಎಂ.ರವೀಂದ್ರ, ಎಸ್.ಐ.ಸುರೇಶ್, ಸಿಬ್ಬಂದಿಗಳಾದ ರಂಗಸ್ವಾಮಿ, ಲೋಕೇಶ್, ಪ್ರಕಾಶ್, ಸಿದ್ಧಿಖಿ ಅಹ್ಮದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: