ಕರ್ನಾಟಕ

ಬೈಕ್ ಮೇಲಿಂದ ಬಿದ್ದು ಯುವತಿ ಸಾವು

ರಾಜ್ಯ(ರಾಯಚೂರು)ಮೇ.25:- ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ  ಬೈಕ್ ಮೇಲಿಂದ ಬಿದ್ದು ಯುವತಿಯೋರ್ವಳು  ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ಹೊರ ವಲಯದಲ್ಲಿ ನಡೆದಿದೆ.

ಮೃತಳನ್ನು ಮುದಗಲ್ ನ ಯುವತಿ ರೇಣುಕಮ್ಮ ಎಂದು ಗುರುತಿಸಲಾಗಿದೆ. ಅಮವಾಸ್ಯೆ  ಹಿನ್ನೆಲೆಯಲ್ಲಿ ಗುರುಗುಂಟಾ ಅಮರೇಶ್ವರರ ದಶ೯ನಕ್ಕೆ ಅಕ್ಕ, ತಮ್ಮ  ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್ ಗೆ  ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಸವಾರ ಎನ್.ಮೌನೇಶ್  ಗಾಯಗೊಂಡಿದ್ದು, ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: