
ಮೈಸೂರು
ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಯುತ್ತಿದೆ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು,ಮೇ.25:- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶಿಕ್ಷಣ, ಮಹಿಳಾ ಕಲ್ಯಾಣ, ಕೃಷಿ ಕೈಗಾರಿಕೆ, ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಯುತ್ತಿದೆ ಎಂದು ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಹದಿನಾರು ಗ್ರಾಮದ ರಸ್ತೆ ಹಾಗೂ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ನಾಲ್ವಡಿ ಮತ್ತು ಸಂವಿಧಾನವನ್ನು ಸರಿಸಮನಾಗಿ ತೂಗುವಂತೆ ಸರ್ಕಾರವನ್ನು ಸಿದ್ದರಾಮಯ್ಯನವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಾನು ರಾಜಕೀಯಕ್ಕೆ ಬಂದು 35 ವರ್ಷಗಳಾಯಿತು. ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಕೊಂಡಿರಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಜನಪರ ಚಿಂತನೆ ಮತ್ತು ಆಲೋಚನೆಗಳನ್ನು ಮೈಗೂಡಿಸಿಕೊಂಡಿದ್ದೆ. ಆ ಚಿಂತನೆಗಳೇ ರಾಜಕೀಯಕ್ಕೆ ಬರಲು ಸಹಾಯಕವಾಯಿತು. ನಿಮ್ಮ ಸಹಕಾರದಿಂದಲೇ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. 16ಗ್ರಾಮದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನನ್ನ ಮಗ ಶಾಸಕನಾಗ್ತಾನೋ ಬಿಡ್ತಾನೋ ಒಳ್ಳೆ ನಾಗರೀಕನಾಗಿರಬೇಕು ಅಷ್ಟೇ. ಇವನೊಂದಿಗೆ ಸಿಎಂ ಪುತ್ರ ಡಾ ಯತೀಂದ್ರ ನೂ ಕೂಡ ನನ್ನ ಮಗನಿದ್ದಂತೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಇಬ್ಬರು ಯುವಕರನ್ನು ರೆಡಿ ಮಾಡುತ್ತಿದ್ದೇವೆ, ಮುಂದೆ ಹೇಗಾಗುತ್ತೆ ನೋಡಬೇಕು ಎಂದರು. ಈ ಸಂದರ್ಭ ಸಂಸದ ಧ್ರುವನಾರಾಯಣ, ಶಾಸಕ ಕಳಲೆಕೇಶವಮೂರ್ತಿ, ಡಾ.ಯತೀಂದ್ರ,ಸುನಿಲ್ ಬೋಸ್ ಮತ್ತಿತರರು ಉಪಸ್ಥಿತರಿದ್ದರು. (ವರದಿ:ಬಿ.ಎಂ,ಎಸ್.ಎಚ್)