ಕರ್ನಾಟಕಮೈಸೂರು

ಅರಮನೆಯ ಅಂದ ಹೆಚ್ಚಿಸಿದ ಹೂಗಳು

flower-2ಮೈಸೂರು ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. ಅರಮನೆ ಆಡಳಿತ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಿಂದ ನಡೆಯುತ್ತಿರುವ ವಿಶಿಷ್ಟ ತಳಿಗಳ ಪುಷ್ಪಗಳು ಹೂ ಪ್ರಿಯರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಮೈಸೂರು ದಸರಾ ಅಂದ್ರೆ ಸಾಕು ನಮಗೆ ಪಟ್ಟನ್ನೆ ನೆನಪಾಗೋದು ಅಂಬಾರಿ ಹೊತ್ತು ಸಾಗುವ ಗಜಪಡೆ. ಆದ್ರೆ, ಇದೇ ದಸರೆಯಲ್ಲಿ  ಅರಮನೆ ಆಡಳಿತ ಮಂಡಳಿ ಆಯೋಜಿಸಿರುವ ಈ ಪ್ರದರ್ಶನ ಅರಮನೆ ಅಂದಧ ಜೊತೆಗೆ ವಿವಿಧ ತಳಿಯ ಫಲಪುಷ್ಪವನ್ನು ಕಣ್ತುಂಬಿಕೊಳ್ಳುವಂತೆ ಮಾಡಿದೆ. ಈ ನಡುವೆ ಜೇನುಗಳು ಸಹ ಹೂವಿನ ಸವಿಯನ್ನ ಸವಿಯುತ್ತಿದ್ದು, ಹೂವಿನ  ಅಂದಧ ಜೊತೆಗೆ ಅರಮನೆಯ ಸೌಂದರ್ಯವನ್ನು ಹೆಚ್ಚಿಸಿದೆ.

“ಅರಮನೆಯಲ್ಲೇ ತಯಾರಾಗುತ್ತೆ ಈ ಫ್ಲವರ್‍ಗಳು”

ಈ ಪುಷ್ಪ ರಾಣಿಯ ಉಗಮ ಸ್ಥಾನ ಅರಮನೆಯ ಆವರಣ. ತೋಟಗಾರಿಕೆ ಇಲಾಖೆಯವರು ಅರಮನೆಯ ಅಂಗಳದಲ್ಲಿ ಗೊಬ್ಬರ ಹಾಕಿ ಸಸಿಯ ಮೂಲಕ ಪಾಟ್‍ಗಳಲ್ಲಿ ಈ ಪುಷ್ಪಗಳನ್ನು ಬೆಳೆಸುತ್ತಾರೆ. ಹೀಗೆ ಬೆಳೆದ ಪುಷ್ಪಗಳನ್ನು ಮೈಸೂರು ದಸರಾ ಅಂಗವಾಗಿ ನಡೆಯುವ ಪ್ರಮುಖ ಫಲಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿಸುತ್ತಾರೆ.

ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ.ಟಿ.ಎಸ್. ‘ಸಿಟಿ ಟುಡೇ’ಯೊಂದಿಗೆ ಮಾತನಾಡಿ, ಈ ಫ್ಲವರ್ ಗಳನ್ನು ನಾವೇ ತಯಾರಿಸಿ ಪಾಲನೆ ಫೋಷಣೆ ಮಾಡುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಅಣಿಗೊಳಿಸುತ್ತೇವೆ. ನಮ್ಮ ಅರಮನೆ ಮಾತ್ರವಲ್ಲದೇ ವರ್ಷಕ್ಕೊಮ್ಮೆ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೂ ಕಳುಹಿಸಿಕೊಡುತ್ತೇವೆ. ವಿಶೇಷ ಅಂದ್ರೆ, ಕಳೆದ ಬಾರಿ ನಮ್ಮ ಅರಮನೆಯಿಂದ ಕಳುಹಿಸಿಕೊಟ್ಟ ಈ ಪುಷ್ಪಗಳಿಗೆ ಬಹುಮಾನ ಬಂದಿದ್ದು., ಈ ಬಾರಿ ನಾವೇ ಮೊದಲ ಪ್ರಶಸ್ತಿಗೆ ಭಾಜನರಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಸುರೇಶ್ ಎನ್.

Leave a Reply

comments

Related Articles

error: