ನಮ್ಮೂರುಮೈಸೂರು

ದೇವರಾಜ ಮಾರುಕಟ್ಟೆ ಪತನ ಪ್ರಕರಣ: ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

ಇತ್ತೀಚಿಗೆ ಪತನಗೊಂಡ ದೇವರಾಜ ಅರಸು ಮಾರುಕಟ್ಟೆಯ ಕಟ್ಟಡದ ಅಡಿಪಾಯ ಪರಿಶೀಲಿಸುವಂತೆ ರಾಜ್ಯ ಮಟ್ಟದ ತಜ್ಞರ ಸಮಿತಿ ಸೋಮವಾರದಂದು ಅಂತಿಮ ವರದಿಯನ್ನು ಸಲ್ಲಿಸಿದೆ.

120 ವರ್ಷ ಹಳೆಯ ದೇವರಾಜ ಮಾರುಕಟ್ಟೆ ಇತ್ತೀಚಿಗೆ ಪತನಗೊಂಡಿತ್ತು. ತಜ್ಞರ ಸಮಿತಿಯ ಸದಸ್ಯರಾದ ಶ್ರೀ ಜಯಚಾಮರಾಜೇಂದ್ರ ಕಾಲೇಜ್‍ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲ ಸೈಯೀದ್ ಶಕೀಬ್ ಉರ್ ರೆಹಮಾನ್ ಮತ್ತು ಕರ್ನಾಟಕ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಆರ್.ಜಗದೀಶ್ ಕಟ್ಟಡದ ಪರಿಶೀಲನೆ ನಡೆಸಿ ಮೇಯರ್ ಬಿ.ಎಲ್. ಬೈರಪ್ಪ ಉಪಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್‍ರಿಗೆ ವರದಿ ಸಲ್ಲಿಸಿದರು.

ಮೂಲಗಳ ಮಾಹಿತಿ ಪ್ರಕಾರ, ಕಟ್ಟಡ ಪುನರ್ ನಿರ್ಮಿಸುವಂತೆ ತಜ್ಞರ ಸಮಿತಿ ತಿಳಿಸಿದೆ. ಕಟ್ಟಡದ ಶೇ.80ರಷ್ಟು ಭಾಗ ಶಿಥಿಲಗೊಂಡಿದ್ದು, ಪುನರ್ ನಿರ್ಮಾಣ ಅಸಾಧ್ಯ. ಅದನ್ನು ಪೂರ್ತಿಯಾಗಿ ಕೆಡವಿ ಮತ್ತೆ ಕಟ್ಟಡ ನಿರ್ಮಿಸುವುದು ಸೂಕ್ತ. ಪಾರಂಪರಿಕ ಮೌಲ್ಯಕ್ಕೆ ಹಾನಿಯಾಗದಂತೆ ಕಟ್ಟಡವನ್ನು ಕಟ್ಟಿ ಎಂದು ಪಾಲಿಕೆಗೆ ಮನವಿ ಮಾಡಿದರು.

 

Leave a Reply

comments

Related Articles

error: