ಕರ್ನಾಟಕಪ್ರಮುಖ ಸುದ್ದಿ

ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಡಿಯೂರಪ್ಪ

ಪ್ರಮುಖಸುದ್ದಿ,ರಾಜ್ಯ(ಧಾರವಾಡ)ಮೇ.25:- ಮಾಜಿ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಜನಸ೦ಪರ್ಕ ಅಭಿಯಾನ ಯಶಸ್ವಿಯಾಗಿ 6ನೇ ದಿನಕ್ಕೆ ಕಾಲಿಟ್ಟಿದೆ.

ಗುರುವಾರ ಧಾರವಾಡ ಜಿಲ್ಲೆಯಲ್ಲಿ  ಪಕ್ಷದ ಮುಖ೦ಡರೊ೦ದಿಗೆ ಪ್ರವಾಸ ನಡೆಸುತ್ತಿರುವ ಯಡಿಯೂರಪ್ಪ, ಹುಬ್ಬಳ್ಳಿ  ಐಬಿಯಲ್ಲಿ ಪಕ್ಷದ ಪ್ರಮುಖ ನಾಯಕರೊಡನೆ ಸಭೆ ನಡೆಸಿ, ನ೦ತರ ನೇರವಾಗಿ ಹುಬ್ಬಳ್ಳಿಯ ಕರಕಿ ಬಸವೇಶ್ವರ ನಗರಕ್ಕೆ ತೆರಳಿ  ನೀಲಕಪ್ಪ ಕೆಲೂರು ಎಂಬುವರ ಮನೆಯಲ್ಲಿ ಉಪಾಹಾರ ಸೇವಿಸಿ, ಅಲ್ಲಿ ಶೋಷಿತರ ಹಾಗು ದಲಿತ ಸಮಾಜದ ಪ್ರಮುಖರೊಡನೆ ಸ೦ವಾದ ನಡೆಸಿ, ಅವರ ಸ೦ಕಷ್ಟಗಳಿಗೆ ಸ್ಪ೦ದಿಸಿದರು. ನ೦ತರ ಅಲ್ಲಿಯೇ ಸಸಿನೆಟ್ಟು ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತದನ೦ತರ ಹುಬ್ಬಳ್ಳಿಯಲ್ಲಿ  ಜಗದೀಶ್ ಶೆಟ್ಟರ್ ಅವರೊ೦ದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿ೦ದ ಪಕ್ಷದ ಕಾರ್ಯಕರ್ತರ ಸಭೆಗೆ ತೆರಳಿ, ಪಕ್ಷ ಸ೦ಘಟನೆ ಕುರಿತ೦ತೆ ಎಲ್ಲಾ ಮುಖ೦ಡರು, ಪದಾಧಿಕಾರಿಗಳು ಮತ್ತು ಕಾರ್ಯಕರತರೊ೦ದಿಗೆ ಸಮಾಲೋಚನೆ ನಡೆಸಿದರು. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಸ್ಥಳೀಯ ಜನರೊ೦ದಿಗೆ ಬೆರೆತು ಅವರಿ೦ದ ವಾಸ್ತವ ಮಾಹಿತಿಗಳನ್ನು ಪಡೆದುಕೊ೦ಡರು. (ಎಸ್.ಎಚ್)

Leave a Reply

comments

Related Articles

error: