ಮೈಸೂರು

ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಿ: ಗಣೇಶ ಭಟ್

ವನ್ಯಜೀವಿಗಳಿಂದ ಕೂಡಿರುವ ಕಾಡು ದೇಶದ ಸಂಪತ್ತು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಮೈಸೂರು ವಿಭಾಗದ ಅರಣ್ಯಾಧಿಕಾರಿ ಗಣೇಶ ಭಟ್ ತಿಳಿಸಿದರು.

ಕರ್ನಾಟಕ ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗ ಮೈಸೂರು ವತಿಯಿಂದ ಕೋಟೆ ಆಂಜನೇಯ ದೇವಳದ ಬಳಿ ಹಮ್ಮಿಕೊಳ್ಳಲಾದ 62ನೇ ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ ಕೆಲವು ವರ್ಷಗಳಿಂದ ನಾವು ವನ್ಯಜೀವಿ ಸಪ್ತಾಹವನ್ನು ಮಾಡಿಕೊಂಡು ಬರುತ್ತಿದ್ದೇವೆ. ವನ್ಯ ಜೀವಿಗಳ ರಕ್ಷಣೆ ನಡೆಯಬೇಕಾಗಿದೆ. ನಾವು ಅರಣ್ಯಗಳನ್ನು ಕಡಿದು ನಾಶಗೊಳಿಸುತ್ತಿರುವುದರಿಂದ ಅರಣ್ಯದಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತಿವೆ. ಹಾಗಾಗದಂತೆ ನೋಡಿಕೊಳ್ಳಬೇಕು. ಅರಣ್ಯ ನಾಶ ಸಲ್ಲದು. ವನ್ಯಜೀವಿಗಳನ್ನು ಉಳಿಸಿಕೊಳ್ಳದಿದ್ದರೆ ನಾವು ಮುಂದಿನ ಪೀಳಿಗೆಗೆ ಅವುಗಳನ್ನು ಚಿತ್ರದಲ್ಲಿ ಮಾತ್ರ ತೋರಿಸಿಕೊಡಬೇಕಾಗುತ್ತದೆ ಎಂದರು.

ಈ ಸಂದರ್ಭ ಪಶುವೈದ್ಯ ನಾಗರಾಜ್ ಉಪಸ್ಥಿತರಿದ್ದರು. ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳು ತಮ್ಮ ಬೆನ್ನಮೇಲೆ ನಾವು ಯಾರಿಗೂ ತೊಂದರೆ ಕೊಡುವವರಲ್ಲ, ನಾನು ನಿಮ್ಮಲ್ಲಿ ಒಬ್ಬ, ನಾನು ಈ ರಾಜ್ಯದ ಹೆಮ್ಮೆ,, ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಎಂಬ ಬರಹ ಬರೆದ ಬ್ಯಾನರ್ ಗಳನ್ನು ಇಟ್ಟು ಕೋಟೆ ಆಂಜನೇಯ ದೇವಳದಿಂದ ಬನ್ನಿಮಂಟಪದವರೆಗೆ ಜಾಥಾ ನಡೆಸಿರುವುದು ಕಂಡು ಬಂತು. ವಿವಿಧ ಕಾಲೇಜುಗಳ ಎನ್ ಸಿಸಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ರಸ್ತೆಯಲ್ಲಿ ಆನೆಗಳು ಸಾಗುತ್ತಿರುವ ವೇಳೆ ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಸಾರ್ವಜನಿಕರು ವೀಕ್ಷಿಸುತ್ತಿದ್ದರು.

Leave a Reply

comments

Related Articles

error: