ಕರ್ನಾಟಕಪ್ರಮುಖ ಸುದ್ದಿ

ಸದನಕ್ಕೆ ದೀರ್ಘ ಸಮಯ ಗೈರು : ಸ್ಪೀಕರ್ ಕೋಳಿವಾಡ್‌ಗೆ ಅಂಬರೀಷ್ ಉತ್ತರ

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಮೇ 26 : “ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಸದನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ” ಎಂದು ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಪ್ರಶ್ನೆಗೆ ಅಂಬರೀಶ್ ಉತ್ತರ ನೀಡಿದ್ದಾರೆ.

“ಆರೋಗ್ಯ ಸರಿಯಿಲ್ಲದ ಕಾರಣ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ದೇನೆ. ಹವಾನಿಯಂತ್ರಣ ವ್ಯವಸ್ಥೆ ದೇಹಕ್ಕೆ ಒಗ್ಗುತ್ತಿರಲಿಲ್ಲ. ಹಾಗಾಗಿ ಸದನಕ್ಕೆ ಗೈರಾಗಿದ್ದೆ” ಎಂದು ಮಾಜಿ ಸಚಿವ ಹಾಲಿ ಮಂಡ್ಯ ಕ್ಷೇತ್ರ ಶಾಸಕರಾಗಿರುವ ಅಂಬರೀಶ್‌ ಅವರು ಪತ್ರದ ಮೂಲಕ ಸ್ಪೀಕರ್ ಕೆ.ಬಿ. ಕೋಳಿವಾಡ ಅವರಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಇದಕ್ಕೂ ಮೊದಲು ಸದನಕ್ಕೆ ಗೈರಾಗಿರುವ ಬಗ್ಗೆ ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಅಂಬರೀಶ್ ಗೈರಾಗಿರುವ ಕಾರಣ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮಂಡ್ಯ ಜಿಲ್ಲಾ ಜೆಡಿಯು ಮುಖಂಡರು ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್ ಕೋಳಿವಾಡಗೆ ಪತ್ರ ಬರೆದಿದ್ದರು.

ಸದನಕ್ಕೆ ಮತ್ತು ಕ್ಷೇತ್ರಕ್ಕೆ ಹಾಜರಾಗದೇ ಇರುವುದಕ್ಕೆ ಉತ್ತರ ನೀಡುವಂತೆ ಸ್ಪೀಕರ್ ಸೂಚನೆಗೆ ಪ್ರತಿಯಾಗಿ ಅಂಬರೀಶ್‌ ಸ್ಪಷ್ಟೀಕರಣ ನೀಡಿದ್ದಾರೆ. ಕ್ಷೇತ್ರಕ್ಕೆ ಹೋಗುತ್ತಿಲ್ಲ ಎಂಬ ದೂರು ರಾಜಕೀಯ ಪ್ರೇರಿತ ಎಂದಿರುವ ಅಂಬರೀಶ್‌ ಅವರು, ನನ್ನ ವಿರುದ್ಧ ದೂರು ನೀಡಿರುವವರು ರಾಜಕೀಯ ಪಕ್ಷವೊಂದರ ಮುಖಂಡರು. ಕ್ಷೇತ್ರದ ಜನರಾಗಲಿ, ಸಾರ್ವಜನಿಕರಾಗಲಿ ದೂರು ನೀಡಿಲ್ಲ. ನಾನು ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತಿದ್ದೇನೆ” ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: