ಪ್ರಮುಖ ಸುದ್ದಿಮೈಸೂರು

ನೋಟು ಅಪಮೌಲ್ಯೀಕರಣದ ಪ್ರಮುಖ ರೂವಾರಿ ಅನಿಲ್ ಬೋಕಿಲ್ ಅವರಿಂದ ಉಪನ್ಯಾಸ: ಮೇ 27 ರಂದು

ಮೈಸೂರು.ಮೇ.26 : ನವೆಂಬರ್ 8 ರಂದು ದೇಶದಲ್ಲಿಯೇ ಸಂಚಲನವುಂಟು ಮಾಡಿದ್ದ ಪ್ರಮುಖ ಮುಖ ಬೆಲೆಯ ನೋಟು ಅಪಮೌಲ್ಯೀಕರಣದ ಹಿಂದಿನ ಪ್ರಮುಖ ರೂವಾರಿಯಾದ ವಾಣಿಜ್ಯ ತಜ್ಞ ಅನಿಲ್ ಬೋಕಿಲ್ ಅವರಿಂದ ‘ನೋಟು ಅಪಮೌಲ್ಯೀಕರಣ’ ಕುರಿತು ಮಾಹಿತಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ನಮ್ಮ ಮೈಸೂರು ಫೌಂಡೇಷನ್ ನ ಎಸ್.ಕೆ.ದಿನೇಶ್ ತಿಳಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ  ಮಾಹಿತಿ ಕಾರ್ಯಕ್ರಮವು ಮೇ  27 ರ ಸಂಜೆ 6 ಗಂಟೆಗೆ  ಕೆ.ಆರ್.ಎಸ್ ರಸ್ತೆಯ ರೋಟರಿ ಶಾಲೆಯಲ್ಲಿ ನಡೆಯಲಿದೆ.  ನಮ್ಮ ಮೈಸೂರು ಫೌಂಡೇಷನ್, ಸಿ.ಐ.ಐ ಹಾಗೂ ಪುಣೆಯ  ಅರ್ಥಕ್ರಾಂತಿ ಪ್ರತಿಷ್ಠಾನದ ಸಹಯೋಗದೊಂದಿಗೆ ಜರುಗುತ್ತಿರುವ ಈ ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿಯವರಿಗೆ ನೋಟು ಅಪಮೌಲ್ಯೀಕರಣದ ಬಗ್ಗೆ ಸಲಹೆ ನೀಡಿದ್ದ ಅನಿಲ್ ಬೋಕಿಲ್ ಅವರು “ನೋಟ್ ಅಮಾನೀಕರಣದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಪರಿಣಾಮಗಳು” ಎಂಬ ವಿಷಯ ಕುರಿತಾಗಿ ಮಾಹಿತಿ ನೀಡಲಿದ್ದಾರೆ.  ಇವರು ದೇಶದಾದ್ಯಂತ ಸುಮಾರು 800 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.  ಪ್ರಸ್ತುತ ದೇಶದಲ್ಲಿನ ಕಪ್ಪು ಹಣದ ನಿರ್ಮೂಲನೆ, ತೆರಿಗೆಯಲ್ಲಿ ಮಹತ್ತರ ಬದಲಾವಣೆ, ಏಕರೂಪ ತೆರಿಗೆ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಫೌಂಡೇಶನ್ ನ ಟ್ರಸ್ಟಿಗಳಾದ ಶ್ರೀಹರ್ಷ, ಬ್ರಹ್ಮಾಚಲ, ಹಾಗೂ ಖಜಾಂಚಿ ಯಶವಂತ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: