ಮೈಸೂರು

ಅಕ್ಟೋಬರ್ 8: ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್

ಐತಿಹಾಸಿಕ ಮೈಸೂರು ದಸರಾ ಉತ್ಸವ ದಿನ ದಿನಕ್ಕೆ ರಂಗೇರುತ್ತಲೇ ಇದೆ. ಗುರುವಾರ ಅಂದರೆ ಅಕ್ಟೊಬರ್ 8ರಂದು ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ನಡೆಯಲಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.

ಪೊಲೀಸರು ಮಂಗಳವಾರ ಮುಂಜಾನೆಯಿಂದಲೇ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ವಾದ್ಯವೃಂದದ ತಯಾರಿ ನಡೆಸುತ್ತಿರುವುದು ಕಂಡು ಬಂತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಸುಮಾರು 500ಕ್ಕೂ ಹೆಚ್ಚು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮೈಸೂರು ಮೂಲದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಜೈಹೋ ಹಾಡನ್ನು ವಾದ್ಯ ವೃಂದದಲ್ಲಿ ಅಳವಡಿಸಿಕೊಳ್ಳಲು ತಯಾರಿ ನಡೆದಿದೆ. ವಂದೇ ಮಾತರಂ ಹಾಗೂ ಪರೇಡ್, ಗೌರವ ವಂದನೆ ಸಲ್ಲಿಸುವಿಕೆಯ ಅಭ್ಯಾಸವೂ ನಡೆದಿದೆ.

ಈ ಸಂದರ್ಭ ಉಪಸ್ಥಿತರಿದ್ದ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ ಗುರುವಾರ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಆಗಮಿಸಲಿದ್ದಾರೆ ಎಂದು ತಿಳಿಸಿದರಲ್ಲದೇ ಪಾಲ್ಗೊಳ್ಳುತ್ತಿರುವ 36ಪೊಲೀಸ್ ಬ್ಯಾಂಡ್ ಗೂ ಶುಭ ಕೋರಿದರು.

Leave a Reply

comments

Related Articles

error: