ಕರ್ನಾಟಕಪ್ರಮುಖ ಸುದ್ದಿಮೈಸೂರು

ಕರ್ನಾಟಕದ ಪರ ವಾದಮಂಡಿಸಲು ನಾರಿಮನ್‍ ಒಪ್ಪಿಗೆ

ಫಾಲಿ ನಾರಿಮನ್‍ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ ಕರ್ನಾಟಕ ಕಾನೂನು ತಂಡ ಕಾವೇರಿ ವಿವಾದದಲ್ಲಿ ಕರ್ನಾಟಕದ ಪರ ವಾದ ಮಂಡಿಸಲು ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ವಿಧಾನಮಂಡಲದಲ್ಲಿ ಎಲ್ಲರ ಸಮ್ಮುಖದಲ್ಲಿ ನಿರ್ಣಯ ಕೈಗೊಂಡು ಸುಪ್ರೀಂ ಕೋರ್ಟ್‍ ಆದೇಶವನ್ನು ಪಾಲಿಸಿ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಕರ್ನಾಟಕ ಕಾನೂನು ತಂಡ ಫಾಲಿ ನಾರಿಮನ್‍ಗೆ ಮನವರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫಾಲಿ ನಾರಿಮನ್ ಅವರು ಕರ್ನಾಟಕದ ಪರ ವಾದ ಮಂಡಿಸಲು ಸಮ್ಮತಿ ಸೂಚಿಸಿದ್ದಾರೆ.

ಪ್ರತಿಪಕ್ಷಗಳ ಟೀಕೆಗೆ ಕಿವಿಗೊಡದಂತೆ ನಾರಿಮನ್‍ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ನಡೆದ ವಿಚಾರಣೆ ವೇಳೆ ಕರ್ನಾಟಕ, ತಮಿಳುನಾಡಿಗೆ ನೀರು ಹರಿಸದೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿ ನಾರಿಮನ್‍ ಅವರು ವಾದ ಮಂಡಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನ್ಯಾಯವಾದಿ ಮತ್ತು ಕಾಂಗ್ರೆಸ್ ನಾಯಕ ಕಪಿಲ್‍ ಸಿಬಲ್‍ ಅವರನ್ನು ಸ್ಥಾನಕ್ಕೆ ನೇಮಕ ಮಾಡುವ ಯತ್ನಗಳೂ ಕೂಡ ನಡೆದಿದ್ದವು.

Leave a Reply

comments

Related Articles

error: