ಮೈಸೂರು

ಜಲನಿರ್ವಹಣೆಯ ಆಧುನಿಕ ತಂತ್ರಜ್ಞಾನದ ಮಾಹಿತಿಯ ಅಗತ್ಯವಿದೆ: ರಾಜೇಂದ್ರಸಿಂಗ್

ರಾಷ್ಟ್ರೀಯ ಜಲನೀತಿ ಜಾರಿಯಿಂದ ಯಾವುದೇ ಉಪಯೋಗವಿಲ್ಲ. ಜನರಿಗೆ ಇಂದು ಜಲ ನಿರ್ವಹಣೆಯ ಆಧುನಿಕ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಅವಶ್ಯಕತೆ ಇದೆ ಎನ್ನುವುದು ಭಾರತದ ಜಲತಜ್ಞ ರಾಜೇಂದ್ರ ಸಿಂಗ್ ಅವರ ಅಭಿಮತ.

ಮೈಸೂರಿನ ಪತ್ರಿಕಾಭವನದಲ್ಲಿ ಮಂಗಳವಾರ ಮಾದ್ಯಮ ಮತ್ತು ರೈತರೊಂದಿಗೆ ಸಂವಾದ ನಡೆಸಿದ ಅವರು ಎಲ್ಲರೂ ರಾಷ್ಟ್ರೀಯ ಜಲನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಪ್ರಯೋಜನವಿಲ್ಲ.ಕೇವಲ ಎಂಎನ್ ಸಿ ಕಂಪನಿಗಳು ಮಾತ್ರ ಇದರ ಲಾಭ ಪಡೆದುಕೊಳ್ಳಲಿದೆ ಎಂದರು.

ಜಲನೀತಿಯಿಂದ ನೀರು ಖಾಸಗೀಕರಣವಾಗಲಿದ್ದು, ನೀರು ಹಂಚಿಕೆಯಲ್ಲಿ ಪರವಾನಗಿ ಪತ್ರ ಚಾಲ್ತಿಯಲ್ಲಿ ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇದರಿಂದ ಜನಸಾಮಾನ್ಯರಿಗೆ ಏನೂ ಲಾಭವಿಲ್ಲ. ಸರ್ಕಾರವೇ ಇದರಿಂದ ಲಾಭ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನ ಮಧ್ಯಪ್ರವೇಶ ಸಲ್ಲದು. ಸಂಸತ್ತೇ ನಿರ್ಧಾರ ಕೈಗೊಂಡು ಸಂಸತ್ ನಲ್ಲಿಯೇ ಅದನ್ನು ಪರಿಹರಿಸಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಕಾರ್ಯದರ್ಶಿ ಲೋಕೇಶ್ ಬಾಬು, ರಾಜ್ಯ ಕಬ್ಬುಬೆಳೆಗಾರರ ಸಂಗದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: