ಮೈಸೂರು

ಮೈಸೂರು ಮೃಗಾಲಯದಲ್ಲಿ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ

ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಮೈಸೂರಿನ ಮೃಗಾಲಯದಲ್ಲಿ ಇತ್ತೀಚಿಗೆ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ ನಡೆಯಿತು.

ಸುಮಾರು ಮೃಗಾಲಯ ವಿಭಾಗದಲ್ಲಿ 76 ಮತ್ತು ವನ್ಯಜೀವಿ ವಿಭಾಗದಲ್ಲಿ 135 ಮಂದಿ ಛಾಯಾಗ್ರಾಹಕರು ಸೇರಿ ಒಟ್ಟು 211 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 211 ಛಾಯಗ್ರಾಹಕರಲ್ಲಿ 164 ಮಂದಿಯ ಫೋಟೊಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ವನ್ಯಜೀವಿ ಫೋಟೊಗ್ರಾಫರ್‍ಗಳಾದ ಕವಲೆ, ವೆಂಕಟೇಶ್ ಮತ್ತು ವಿನಯ್ ಲಕ್ಷ್ಮಣ್ ಉತ್ತಮ ಫೋಟೊಗಳನ್ನು ಆಯ್ಕೆ ಮಾಡಿದ್ದಾರೆ.

ವನ್ಯಜೀವಿ ಛಾಯಾಗ್ರಹಣದಲ್ಲಿ ಎಮ್. ಪ್ರಭು ಪ್ರಸಾದ್ ಪ್ರಥಮ, ಕೆ.ಎ. ಮಾಚಯ್ಯ ದ್ವಿತೀಯ, ವಿನಯ್ ಕುಮಾರ್ ಎಸ್. ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ  ಉದಯ ತೇಜಸ್ವಿ ಅರಸ್, ರಾಜೇಶ್ ಜಿ.ಎಲ್., ಎಸ್.ಆರ್. ಮಧುಸೂದನ್‍ ಮತ್ತು ಕೆ.ಪಿ. ಮಾರ್ಟಿನ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಮೃಗಾಲಯ ವಿಭಾಗದಲ್ಲಿ ಸೆಲ್ವರಾಜ್ ಎಸ್. ಪ್ರಥಮ, ಎನ್.ಜಿ. ಸುಧೀರ್ ದ್ವಿತೀಯ, ಪೃಥ್ವಿ ಬಿ ತೃತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಎಮ್. ಪ್ರಭು ಪ್ರಸಾದ್, ಪೃಥ್ವಿ ಬಿ., ಮನು ಅಯ್ಯಪ್ಪ ಮತ್ತು ಎಚ್. ಬಸವರಾಜು ಪ್ರಶಸ್ತಿ ಪತ್ರ ನೀಡಿದರು.

ಪ್ರಶಸ್ತಿಯು ಪ್ರಥಮ-5 ಸಾವಿರ, ದ್ವಿತೀಯ-3 ಸಾವಿರ, ತೃತೀಯ- 2 ಸಾವಿರ ನಗದು ಬಹುಮಾನವನ್ನೊಳಗೊಂಡಿದೆ. ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ ಮಂಗಳವಾರದಿಂದ ಆರಂಭಗೊಂಡಿದ್ದು, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವೀಕ್ಷಣೆಗೆ ಲಭ್ಯವಿದೆ.

 

Leave a Reply

comments

Related Articles

error: