ಮೈಸೂರು

ಎ.ಟಿ.ಎಂ.ಇ. ಕಾಲೇಜಿನಲ್ಲಿ ಎಂಬೆಡೆಡ್ಡ್ ಕಾರ್ಯಾಗಾರ

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಕೆ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಬನ್ನೂರು ರಸ್ತೆಯಲ್ಲಿರುವ ಎ.ಟಿ.ಎಂ. ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ‘ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಎಂಬೆಡೆಡ್ಡ್ ಸಿಸ್ಟಂ- ಡಿಸೈನ್ ಅಂಡ್ ಆರ್ಕಿಟೆಕ್ಚರ್ ಬಗ್ಗೆ ಕಾರ್ಯಾಗಾರ ಜರುಗಿತು.

ಪ್ರಾಡಕ್ಟ್ ಆರ್ಕಿಟೆಕ್ಚರ್ ನ ಮುಖ್ಯಸ್ಥ ಹಾಗೂ ಸಂಸ್ಥಾಪಕ ನಿಖಿಲ್ ಶೆಟ್ಟಿ, ಲರ್ನಿಂಗ್ ಅಂಡ್ ಡೆವಲ್ಪಮೆಂಟ್  ಮುಖ್ಯಸ್ಥ  ಮಧುಸೂದನ್. ಬಿ.ವಿ, ವಿಟೋ ಎಜುಕೇಷನ್ ಸಲ್ಯೂಷನ್ ನ ಗಗನ್ ಗಣೇಶ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮೈಕ್ರೋಕಂಟ್ರೋಲರ್ ಕಾರ್ಯಚಟುವಟಿಕೆ, ವಿನ್ಯಾಸ, ವಿವಿಧ ಬಗೆಯ ಮಾಡಲ್‍ಗಳ ಅನುಷ್ಠಾನ, ಯೋಜನೆಗಳ ವಿಶ್ಲೇಷಣೆ, ವಸ್ತುಗಳನ್ನು ಪ್ರಯೋಗಗಳಲ್ಲಿ ಬಳಸುವ ಬಗ್ಗೆ ತಿಳಿಸಲಾಯಿತು. 52 ವಿದ್ಯಾರ್ಥಿಗಳು ಪಾಲ್ಗೊಂಡು ಕನಿಷ್ಠ ವೋಲ್ಟೆಜ್ ಮತ್ತು ಗರಿಷ್ಠ ವೋಲ್ಟೆಜ್ ರಕ್ಷಣಾತ್ಮಕ ಉಪಕರಣ, ತಾಪಮಾನ ಆಧಾರಿತ ಡಿಸಿ ಫ್ಯಾನ್ ಕಂಟ್ರೋಲರ್, ರೈಲ್ವೆ ಭದ್ರತಾ ವ್ಯವಸ್ಥೆ ಟ್ರ್ಯಾಕ್, ಸ್ವಯಂ ಚಾಲಿತ ನೀರಿನ ವಿತರಕವನ್ನು ಪ್ರಯೋಗಿಕ ಕಾರ್ಯಚಟುವಟಿಕೆ ನಡೆಸಿದರು. ಅಂತಿಮವಾಗಿ ವಿದ್ಯಾರ್ಥಿಗಳಿಗೆ ಕೋರ್ಸ್ ಸರ್ಟಿಫಿಕೆಟ್ ವಿತರಿಸಲಾಯಿತು.

ವಿಭಾಗ ಮುಖ್ಯಸ್ಥ ಡಾ.ಪಾರ್ಥಸಾರಥಿ, ಕಾರ್ಯಾಗಾರದ ಸಂಚಾಲಕಿ ಎಸ್. ಪೂರ್ಣಿಮಾ ನೇತೃತ್ವ ವಹಿಸಿದ್ದರು.

Leave a Reply

comments

Related Articles

error: