ಕರ್ನಾಟಕಮೈಸೂರು

ಇಂದು, ನಾಳೆ 24 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ: ಕರ್ನಾಟಕ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಆರು ದಿನಗಳ ಕಾಲ ನೀರು ಬಿಡುತ್ತೇವೆಂದು ಕರ್ನಾಟಕ ಸರಕಾರ ಹೇಳಿದೆ. ಸೆ.30ರ ಆದೇಶವನ್ನು ಪಾಲಿಸುವುದಾಗಿ ಕೋರ್ಟ್‍ಗೆ ಕರ್ನಾಟಕ ಪರ ವಕೀಲರು ತಿಳಿಸಿದ್ದಾರೆ.

ಅ.1ರಿಂದ 6ರವರೆಗೆ ತಮಿಳುನಾಡಿಗೆ ನೀರು ಬಿಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಬಾಕಿ ಕೊರತೆಯನ್ನು ನೀಗಿಸುತ್ತೇವೆ. ಈಗಾಗಲೇ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದೇವೆ. ಇಂದು ನಾಳೆ ಸೇರಿ 24 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆಂದು ಸುಪ್ರೀಂ ಕೋರ್ಟ್‍ಗೆ ವಕೀಲ ಫಾಲಿ ನಾರಿಮನ್ ತಿಳಿಸಿದ್ದಾರೆ.

ಅ.7ರಿಂದ 18ರವರೆಗೆ ಮತ್ತೆ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಕರ್ನಾಟಕ ಸರಕಾರದ ಜತೆ ಚರ್ಚಿಸಿ ಕೋರ್ಟ್‍ಗೆ ಮಾಹಿತಿ ನೀಡಿ. ಲೆಕ್ಕಾಚಾರದಂತೆಯೇ ನೀರು ಬಿಡಲು ಆದೇಶಿಸಿದ್ದೇವೆಂದು ನಾರಿಮನ್‍ಗೆ ಸುಪ್ರೀಂ ತಿಳಿಸಿದೆ. ಇದಲಕ್ಕೆ ಉತ್ತರಿಸಿದ ನಾರಿಮನ್, ನೀರು ಬಿಡಲು ಲೆಕ್ಕಾಚಾರವಷ್ಟೇ ಮುಖ್ಯವಲ್ಲ. ವಾಸ್ತವ ಸ್ಥಿತಿಯನ್ನು ಗಮನಿಸಿ ಆದೇಶ ನೀಡಬೇಕಾಗಿತ್ತೆಂದು ತಿಳಿಸಿದ್ದಾರೆ.

Leave a Reply

comments

Related Articles

error: