ಕರ್ನಾಟಕ

ಚಾಮರಾಜನಗರದ ಪೊಲೀಸ್ ವರಿಷ್ಠಾಧಿಕಾರಿಗೆ ಬೀಳ್ಕೊಡುಗೆ

ರಾಜ್ಯ,(ಚಾಮರಾಜನಗರ) ಮೇ 27: ವಿಜಯಪುರಕ್ಕೆ ವರ್ಗಾವಣೆಯಾದ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್  ಆರ್ ಜೈನ್ ಅವರನ್ನು ಇಂದು ಬೀಳ್ಕೊಡಲಾಯಿತು.

ಚಾಮರಾಜನಗರಕ್ಕೆ ಬಂದು ಎರಡು ವರ್ಷ ಸಮೀಪಿಸುವ ಇಪ್ಪತ್ತು ದಿನಗಳ ಮುಂಚೆಯೇ ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದೆ. ಇದು ಕೆಲವರಲ್ಲಿ ದುಃಖ ತಂದರೂ ಸಹ ಅವರ ಸೇವೆ ಮುಂದಿನ ಜನತೆಗೆ  ಅಗತ್ಯವಾಗಿರುವುದರಿಂದ ಅನಿವಾರ್ಯ ಎಂದು ಬೀಳ್ಕೊಟ್ಟ ಅಧಿಕಾರಿಗಳು ಕೊಂಡಾಡಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣ, ಅಂಬೇಡ್ಕರ್ ಚಿತ್ರ, ಪ್ಲೆಕ್ಸ್, ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿದ್ದು, ಕರಿಕಲ್ಲು ಮರಳು ದಂಧೆಗೆ ಕಡಿವಾಣ ಪ್ರಕರಣ ಮಹತ್ವದಾಗಿದ್ದವು ಎಂದು ಅಧಿಕಾರಿಗಳು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಗೀತಾ ಪ್ರಸನ್ನ, ಚಾಮರಾಜನಗರದ ಡಿವೈಸ್ಪಿ ಗಂಗಾಧರಸ್ವಾಮಿ,  ಕೊಳ್ಳೇಗಾಲ ಡಿವೈಸ್ಪಿ ಸ್ನೇಹ, ಡಿಸಿಆರ್ ಬಿ ಡಿವೈಸ್ಪಿ ಕುಮಾರ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. (ವರದಿ: ಆರ್.ವಿ.ಎಸ್, ಎಲ್.ಜಿ)

Leave a Reply

comments

Related Articles

error: