ಮೈಸೂರು

ಯುವತಿಯರೊಂದಿಗೆ ಅಸಭ್ಯ ವರ್ತನೆ : ಪಿಡಿಓ ಗೆ ದಿಗ್ಬಂಧನ

ಮೈಸೂರು,ಮೇ.27:- ಯುವತಿಯರೊಂದಿಗೆ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ನೂರಲಕುಪ್ಪೆ ಗ್ರಾಮಪಂಚಾಯತ್  ಪಿಡಿಓಗೆ ಪಂಚಾಯತ್ ನಲ್ಲೇ  ಗ್ರಾಮಸ್ಥರು ದಿಗ್ಬಂಧನ ಹಾಕಿದ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಪಿಡಿಓ ರಾಜಶೇಖರ್ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಇಇಓ ಶ್ರೀಕಂಠ ರಾಜೇ ಅರಸ್ ನನ್ನೂ ಗ್ರಾಮಸ್ಥರು ಕೂಡಿ ಹಾಕಿದ್ದಾರೆ. ರಾಜಶೇಖರ್ ಮೇಲೆ ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿ ಇಇಓಗೆ ಪತ್ರ ಬರೆಯಲಾಗಿದ್ದು, ಎರಡು ದಿನದಲ್ಲಿ ಕ್ರಮ ವಹಿಸುವ ಭರವಸೆ ನೀಡಿದ ನಂತರ ಇಬ್ಬರೂ ಅಧಿಕಾರಿಗಳನ್ನು  ಬಿಡುಗಡೆ ಮಾಡಿದ್ದಾರೆ. (ವರದಿ:ಆರ್.ವಿ,ಎಸ್.ಎಚ್)

Leave a Reply

comments

Related Articles

error: