ಮನರಂಜನೆಮೈಸೂರು

ಜಾಗ್ವಾರ್ ನೋಡುವವರಿಗೆ ಬೆಳ್ಳಿ ನಾಣ್ಯ!

ನೀವೇನಾದ್ರೂ ನಿಖಿಲ್ ಅನ್ನೋ ಹೆಸರಿಟ್ಟುಕೊಂಡಿದ್ದೀರಾ? ಹಾಗಿದ್ರೆ ನಿಮ್ಮ ಅದೃಷ್ಟ ಖುಲಾಯಿಸಿತು ಬಿಡಿ. ಯಾಕಂತ ಕೇಳ್ತಿದ್ದೀರಾ? ಅದ್ರ ಪೂರ್ತಿ ವಿವರಣೆ ಇಲ್ಲಿದೆ ನೋಡಿ.

ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರ ತೆರೆ ಕಾಣುವುದಕ್ಕೂ ಮೊದಲೇ ಭಾರಿ ಸುದ್ದಿ ಮಾಡುತ್ತಿದೆ. ನಿಖಿಲ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎನ್ನುವುದು ಒಂದು ಕಡೆಯಾದರೆ, ಈಗಷ್ಟೇ ಚಂದನವನಕ್ಕೆ ಪ್ರವೇಶಿಸುತ್ತಿರುವ  ಹೊಸ ನಾಯಕ ನಟ.

ಜಾಗ್ವಾರ್ ಟೀಸರ್ ಬಿಡುಗಡೆ, ಹಾಡು ಬಿಡುಗಡೆ ಸೇರಿದಂತೆ ಪ್ರತಿಯೊಂದರಲ್ಲೂ ಅಬ್ಬರದ ತಯಾರಿಯನ್ನೇ ನಡೆಸಿದೆ. ಇದೀಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಅದೇನಂದ್ರೆ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರ ಪ್ರದರ್ಶನಕ್ಕೆ ಬಂದರೆ ಬೆಳ್ಳಿ ನಾಣ್ಯ ಉಚಿತವಾಗಿ ಸಿಗಲಿದೆಯಂತೆ. ಹಾಗಂತ ಇದನ್ನು ಬಂದೋರಿಗೆಲ್ಲಾ ಕೊಡಕಾಗಲ್ಲ. ಯಾಕಂದ್ರೆ ಅದಕ್ಕೊಂದು ಷರತ್ತಿದೆಯಂತೆ. ಬೆಳ್ಳಿ ನಾಣ್ಯ ಸಿಗೋದು ನಿಖಿಲ್ ಅಂತ ಹೆಸರಿಟ್ಟುಕೊಂಡವರಿಗೆ ಮಾತ್ರ. ಹಾಗಂತ ನಿಖಿಲ್ ಅನ್ನೋ ಹೆಸರಿರೋರಿಗೆ ಸಿಗತ್ತೆ ಅಂತ ನೀವಂದು ಕೊಂಡರೆ ಅದೂ ತಪ್ಪು. ಯಾಕಂದ್ರೆ ಸರ್ಕಾರ ನೀಡಿರೋ ಗುರುತಿನ ಪತ್ರ ಅಂದರೆ ವೋಟರ್ ಐಡಿಯನ್ನು ಕಡ್ಡಾಯವಾಗಿ ತೋರಿಸಿ ಬೆಳ್ಳಿ ನಾಣ್ಯವನ್ನು ಪಡೆಯಬಹುದು. ಈ ಕೊಡುಗೆಯನ್ನು ಮೈಸೂರು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ನೀಡುತ್ತಿದ್ದು ಕೇವಲ ಮೊದಲ ದಿನ ಮಾತ್ರ ಬೆಳ್ಳಿ ನಾಣ್ಯ ಸಿಗಲಿದೆ.

Leave a Reply

comments

Related Articles

error: