ಕರ್ನಾಟಕಪ್ರಮುಖ ಸುದ್ದಿ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಮತ್ತೊಂದು ವರ್ಷ ಸಾ.ರಾ. ಗೋವಿಂದು ಅಧ್ಯಕ್ಷ?

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಮೇ 27 : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸಾ.ರಾ.ಗೋವಿಂದು ಅವರನ್ನೇ ಮುಂದುವರಿಸಲು ಚಿತ್ರರಂಗದ ಪ್ರಮುಖರ ಗುಂಪು ಆಶಯ ವ್ಯಕ್ತಪಡಿಸಿದೆ.

ಒಂದು ವರ್ಷ ಕಳೆದಳೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ ಎಂದು ನಿರ್ಮಾಪಕ ಭಾಮಾ ಹರೀಶ್ ಮತ್ತು ಅವರ ತಂಡ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಸಾ.ರಾ. ಗೋವಿಂದು ಅವರ ಅಧಿಕಾರ ಅವಧಿ ಮುಗಿದರೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಕ್ಲೈನ್ ವೆಂಕಟೇಶ್, ಕೆ ಮಂಜು, ಜಯಣ್ಣ, ನಟ ಜಗ್ಗೇಶ್ ಸೇರಿದಂತೆ ಹಲವರು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಸಿ ಸಾ.ರಾ. ಗೋವಿಂದು ಅವರೇ ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬ ನಿರ್ಣಯ ಕೈಕೊಂಡಿದ್ದಾರೆ.

ಸಭೆಯ ನಂತರ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಾ.ರಾ. ಗೋವಿಂದು ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಉತ್ತಮ ಕೆಲಸಗಳು ಆಗಿವೆ.ಅವರಿಂದ ಇಂತಹ ಮತ್ತಷ್ಟು ಉತ್ತಮ ಕೆಲಸಗಳು ಆಗಬೇಕಿದೆ. ಅವರೇ ಅಧ್ಯಕ್ಷರಾಗಿ ಮುಂದುವರಿದರೆ ಸೂಕ್ತ ಎಂದು ಹೇಳಿ ಚಿತ್ರರಂಗದ ವತಿಯಿಂದ ಸಾ.ರಾ.ಗೋವಿಂದು ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕಾಗಿದೆ ಎಂದು ಮನವಿ ಪತ್ರ ಸಲ್ಲಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಇತರೆ ಅಂಗ ಸಂಸ್ಥೆಗಳೂ ಸಾ.ರಾ.ಗೋವಿಂದು ಅವರು ಅಧ್ಯಕ್ಷರಾಗಿ ಮುಂದುವರೆಯಲು ಬೆಂಬಲ ಸೂಚಿಸಿವೆ. ಜೂನ್ 16 ರಂದು ಸರ್ವ ಸದಸ್ಯರ ಸಭೆ ನಡೆಯಲಿದ್ದು ಸಾ.ರಾ.ಗೋವಿಂದು ಅಧ್ಯಕ್ಷರಾಗಿ ಮುಂದುರಿಯಬೇಕೊ ಬೇಡವೋ ಎಂದು ಅಂದು ತೀರ್ಮಾನಿಸಲಾಗುವುದು.

-ಎನ್‍.ಬಿ.ಎನ್.

Leave a Reply

comments

Related Articles

error: