ಮೈಸೂರು

ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ಮೈಸೂರು,ಮೇ.27:- ಮೈಸೂರು ನಗರದಲ್ಲಿ ಮತ್ತೆ ಚಾಕು ಸುದ್ದಿ ಮಾಡುತ್ತಿದೆ. ಪೊಲೀಸರು ಎಷ್ಟೇ ಜಾಗರೂಕರಾಗಿದ್ದರೂ ಕೊಲೆಗಡುಗರು ಕೊಲೆಯಂಥಹ ಹೀನಕೃತ್ಯ ನಡೆಸುತ್ತಲೇ ಇರುತ್ತಾರೆ. ವಿಜಯನಗರದ ನಾಲ್ಕನೇ ಹಂತದಲ್ಲಿ ಬೆಳವಾಡಿಗೆ ತೆರಳುತ್ತಿದ್ದ ಯುವಕನ ಮೇಲೆರಗಿದ ತಂಡವೊಂದು ಆತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ  ಕೊಲೆಗೈದು ಪರಾರಿಯಾಗಿದೆ.

ದುಷ್ಕರ್ಮಿಗಳಿಂದ ಕೊಲೆಯಾದಾತನನ್ನು ಜಯರಾಮ ಎಂದು ಹೇಳಲಾಗಿದೆ. ಈತ ವಿಜಯನಗರದ ನಾಲ್ಕನೇ ಹಂತದಲ್ಲಿ ಸರ್ವೀಸ್ ಸ್ಟೇಶನ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಬೆಳವಾಡಿಯಲ್ಲಿರುವ ಮನೆಗೆ ತೆರಳುತ್ತಿದ್ದ. ಈ ವೇಳೆ ಮಾರ್ಗಮಧ್ಯೆ ಆತನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆತನನ್ನು ಚಾಕುವಿನಿಂದ ತೀವ್ರವಾಗಿ ತಿವಿದು ಕೊಲೆಗೈದಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆಯ ಇನ್ಸಪೆಕ್ಟರ್ ಗುರುಪ್ರಸಾದ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಮೃತ ವ್ಯಕ್ತಿ ಜಯರಾಮ್ ಸರ್ವೀಸ್ ಸ್ಟೇಶನ್ ನಲ್ಲಿ ಕಾರ್ಯನಿರ್ವಹಿಸುವುದಕ್ಕೂ ಮುನ್ನ ಕೇಬಲ್  ಆಪರೇಟರ್ ಆಗಿ  ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹಣಕಾಸಿನ ವಿಷಯವಾಗಿ ಹತ್ಯೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ತನಿಖೆಯ ಬಳಿಕವೇ ಸತ್ಯಾಂಶ ಹೊರಬರಬೇಕಿದೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: