ಕರ್ನಾಟಕನಮ್ಮೂರು

ಅ.7ರಿಂದ 18ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್‍ ನೀರು ಬಿಡಲು ಸುಪ್ರೀಂ ಸೂಚನೆ

ನವದೆಹಲಿ: ತಮಿಳುನಾಡಿಗೆ ಅ.7ರಿಂದ 18ರವರೆಗೆ ಪ್ರತಿದಿನ 2,000 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಆದೇಶಿಸಿದೆ. ತಮಿಳುನಾಡಿಗೆ ಪ್ರತಿದಿನ 1,500 ಕ್ಯೂಸೆಕ್ ನೀರು ಬಿಡುತ್ತೇವೆಂದು ಸುಪ್ರೀಂಗೆ ಕರ್ನಾಟಕದ ಪರ ವಕೀಲರು ಕೋರ್ಟ್‍ಗೆ ತಿಳಿಸಿದ್ದರು.

ಎರಡು ರಾಜ್ಯಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ರಚಿಸಿದ ತಾಂತ್ರಿಕ ಉನ್ನತಾಧಿಕಾರ ತಂಡಕ್ಕೆ ಸುಪ್ರೀಂ ಗ್ರೀನ್‍ ಸಿಗ್ನಲ್‍ ನೀಡಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಂಡವು ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿ ಅ.17ರೊಳಗೆ ಸುಪ್ರೀಂಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ತಂಡದಲ್ಲಿ ನಾಲ್ಕು ರಾಜ್ಯಗಳ ಚೀಫ್‍ ಇಂಜಿನಿಯರ್‍ಗಳು ಇರಲಿದ್ದಾರೆ.  ಕಾವೇರಿ ಕೊಳ್ಳದ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲಿದೆ. ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಅ. 18ಕ್ಕೆ ಮುಂದೂಡಿದೆ.

 

Leave a Reply

comments

Related Articles

error: