ಮೈಸೂರು

ವೀರ ಸಾವರ್ಕರ್ ೧೩೪ನೇ ಜಯಂತಿ ಆಚರಣೆ

ಮೈಸೂರು, ಮೇ ೨೮: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ೧೩೪ನೇ ಜಯಂತಿಯನ್ನು ನಗರದ ಡಿ.ಬನುಮಯ್ಯ ಚೌಕದಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಭಾನುವಾರ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಲಂಡನ್ನಿಗೆ ಹೋಗಿ ಅವರ ನೆಲದಲ್ಲಿಯೇ ಅವರ ವಿರುದ್ದ ಹೋರಾಡಲು ಸಂಘಟನೆ ಮಾಡಿದಂತಹ ಸಾಹಸಿ ವೀರ ಸಾವರ್ಕರ್. ಪ್ರಕಟಣೆಗೂ ಮುನ್ನವೇ ಯಾವುದಾದರೂ ಕೃತಿ ನಿಷೇಧವಾಗಿದ್ದರೆ ಅದು ಸಾವರ್ಕರ್‌ರಿಂದ ರಚಿವಾದ ಕೃತಿ. ಅವರ ಮೊನಚಿನ ಬರವಣಿಗೆಯಲ್ಲಿ ಅಂತಹ ಶಕ್ತಿಯಿತ್ತು ಮತ್ತು ಬ್ರಿಟಿಷರಿಗೆ ಅಷ್ಟು ಭಯವಿತ್ತು. ಅವರು ಪ್ರಾರಂಭಿಸಿದ ಅಭಿನವ ಭಾರತ ಸಂಘಟನೆ ಅಂದು ಲಂಡನ್ನಿನಲ್ಲಿ ನೆಲೆಸಿದ್ದ ನೂರಾರು ಭಾರತೀಯ ಯುವಕರಿಗೆ ಬ್ರಿಟೀಷರ ವಿರುದ್ಧ ಧ್ವನಿ ಎತ್ತುವಂತೆ ಮಾಡಿತ್ತು. ಅಂತಹ ರಾಷ್ಟ್ರ ಪ್ರೇಮಿಯನ್ನು ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಬೆಳಕನ್ನೇ ತೋರಿಸದ ಕರಿನೀರು ಜೈಲುಶಿಕ್ಷೆಗೆ ಒಳಪಡಿಸಿದ್ದ ದೊಡ್ಡ ದುರಂತ ಎಂದು ಹೇಳಿದರು.

ಸ್ವತಂತ್ರಭಾರತದಲ್ಲಿ ಹಲವು ರಾಜ್ಯಗಳಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿರುವುದನ್ನು ನೋಡುತ್ತಿರುವ ಇಂದಿನ ಪೀಳಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಸಾವರ್ಕರ್ ಅವರ ಇಡೀ ಕುಟುಂಬ ತಮ್ಮದೆಲ್ಲವನ್ನು ಕಳೆದುಕೊಂಡು ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದನ್ನು ನಾವುಗಳು ಎಂದಿಗೂ ಮರೆಯಬಾರದು ಎಂದರು.

ಸಮಾಜ ಸೇವಕ ಹಾಗೂ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಉಪಾಧ್ಯಕ್ಷ ಕುಮಾರ್‌ಗೌಡ, ಕಾರ್ಯದರ್ಶಿ ವಿಕ್ರಮ್, ಸದಸ್ಯರಾದ ಎಸ್.ಎನ್.ರಾಜೇಶ್, ಪ್ರದೀಪ್ ಕುಮಾರ್, ಆರ್.ಚಂದ್ರು, ಎಂ.ಕೆ.ಉಮೇಶ್, ಚೆನ್ನಬಸವಣ್ಣ, ಮಿಲ್ ಮಹೇಶ್ ವಿವಿಧ ಸಂಘಟನೆಗಳ ಮುಖಂಡರಾದ ಜೋಗಿ ಮಂಜು, ಅಜಯ್ ಶಾಸ್ತ್ರಿ, ಕೇಬಲ್ ಮಹೇಶ್, ರವಿತೇಜ, ಶ್ರೀಕಾಂತ್ ಕಶ್ಯಪ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: