ಕರ್ನಾಟಕಪ್ರಮುಖ ಸುದ್ದಿ

ಆ್ಯಂಬುಲೆನ್ಸ್ ಗೆ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಸಮಯಪ್ರಜ್ಞೆ ಮೆರೆದ ಸಂಸದರು

ಪ್ರಮುಖಸುದ್ದಿ,ರಾಜ್ಯ(ಮಂಡ್ಯ)ಮೇ.29:- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಮಧ್ಯೆ ಸಿಲುಕಿಕೊಂಡಿದ್ದ ಆ್ಯಂಬುಲೆನ್ಸ್ ಗೆ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ಸಮಯಪ್ರಜ್ಞೆ ಮೆರೆದಿದ್ದಾರೆ.

ಮಾಜಿ ಮುಖ್ಯಂಮತ್ರಿ  ಎಚ್‍.ಡಿ.ಕುಮಾರಸ್ವಾಮಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಡ್ಯಕ್ಕೆ ಆಗಮಿಸಿದ್ದರು. ಈ ವೇಳೆ ನಗರದ ಪ್ರವಾಸಿ ಮಂದಿರದ ಎದುರು ಜಮಾವಣೆಗೊಂಡ ಕಾರ್ಯಕರ್ತರನ್ನು ಮಾತನಾಡಿಸಲೆಂದು ವಾಹನ ನಿಲ್ಲಿಸಿದ್ದರು. ಈ ವೇಳೆ ನೂರಾರು ಕಾರ್ಯಕರ್ತರು ಕುಮಾರಸ್ವಾಮಿಯವರ ವಾಹನವನ್ನು ಸುತ್ತುವರೆದಿದ್ದರು. ನೂರಾರು ಕಾರ್ಯಕರ್ತರು ಒಂದೆಡೆ ಸೇರಿದೊಡನೆ ಮೈಸೂರು ಕಡೆಯಿಂದ ಹೋಗುತ್ತಿದ್ದ ವಾಹನಗಳ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಜೊತೆಗೆ ಟ್ರಾಫಿಕ್ ಜಾಮ್ ಆಗುವ ಸಂದರ್ಭ ನಿರ್ಮಾಣವಾವಾಯಿತು. ಈ ವೇಳೆ ವಾಹನಗಳ ಮಧ್ಯೆ ಆ್ಯಂಬುಲೆನ್ಸ್ ಕೂಡ ಸೇರಿಕೊಂಡಿತ್ತು. ಆ್ಯಂಬುಲೆನ್ಸ್ ಗಮಿನಿಸಿ ಪುಟ್ಟರಾಜು ಅವರು ಕೂಡಲೇ ವಾಹನಗಳನ್ನ ಬೇಗ ಮುಂದೆ ಹೋಗುವಂತೆ ಸೂಚಿಸಿ ಆ್ಯಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: