ಮನರಂಜನೆ

ವಿವೇಕ್ ರಾಜ್‍ ಜತೆ ಮದುವೆ ಗಾಸಿಪ್‍: ಶುದ್ಧ ಸುಳ್ಳು ಎಂದ ರಾಧಿಕಾ

1458808652_radhika-kumaraswamy-webಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಎರಡನೇ ಮದುವೆಯಾಗಿದ್ದಾರಂತೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿರುವ ಅವರ ಬಗ್ಗೆ ಹಲವಾರು ಗಾಸಿಪ್‍ಗಳು ಕೇಳಿಬಂದಿದ್ದವು. ಆದರೆ, ಇದ್ಯಾವುದಕ್ಕೂ ರಾಧಿಕಾ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ, ಈಗ ಮರು ಮದುವೆಯ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕುಪಿತರಾದ ರಾಧಿಕಾ ಇದೆಲ್ಲಾ ಸುಳ್ಳು ಸುದ್ದಿ. ಇದನ್ನು ಯಾರು ಹಬ್ಬಿಸಿದ್ದಾರೋ ಗೊತ್ತಿಲ್ಲ. ಒಂದೂವರೆ ವರ್ಷದ ಹಿಂದೆ ತೆಗೆದಿರುವ ಫೋಟೊಗಳವು. ವಿವೇಕ್‍ ರಾಜ್‍ ನನ್ನ ಒಳ್ಳೆಯ ಸ್ನೇಹಿತ. ಯಾರೋ ಬೇಕೆಂದೇ ಈ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿ ವದಂತಿ ಸೃಷ್ಟಿಸಿದ್ದಾರೆ. ಅವರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯಿಂದ ನನಗೆ ತುಂಬಾ ಬೇಸರವಾಗಿದೆ. ನನಗೆ ಮಗಳು ಕೂಡ ಇದ್ದಾಳೆ. ಅಭಿಮಾನಿಗಳಿಗೂ ಉತ್ತರ ನೀಡಬೇಕು. ಇದರ ಬಗ್ಗೆ ಮಾತನಾಡುವುದಕ್ಕೆ ತುಂಬಾ ಬೇಜಾರಾಗುತ್ತೆ. ನನ್ನ ದಾಂಪತ್ಯದಲ್ಲಿ ಸಮಸ್ಯೆ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ನನ್ನ ವೈಯುಕ್ತಿಕ ವಿಷಯ. ಇದನ್ನು ನಾನೇ ಪರಿಹರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

2002ರಲ್ಲಿ ‘ನೀಲ ಮೇಘ ಶ್ಯಾಮ’ ಚಿತ್ರದ ಮೂಲಕ ರಾಧಿಕಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮುಂದೆ ವಿಜಯ್‍ ರಾಘವೇಂದ್ರ ಜತೆ ನಟಿಸಿದ “ನಿನಗಾಗಿ”, ಶಿವರಾಜ್‍ ಕುಮಾರ್ ಜತೆ ನಟಿಸಿದ “ತವರಿಗೆ ಬಾ ತಂಗಿ” ಚಿತ್ರಗಳ ಮೂಲಕ ಜನಪ್ರಿಯರಾಗಿದ್ದರು.

Leave a Reply

comments

Related Articles

error: