ಮೈಸೂರು

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೈಸೂರು, ಮೇ 29: ಮಕ್ಕಳಿಲ್ಲದ ಕೊರಗಿನಿಂದ ಬೇಸತ್ತ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ  ಎಡಹಳ್ಳಿ ಬಳಿ ನಡೆದಿದೆ.

ಲಕ್ಷ್ಮಣ್ ನಾಯಕ (35) ಮೃತ ವ್ಯಕ್ತಿ. 10 ವರ್ಷಗಳ ಹಿಂದೆ ಕವಿತಾರನ್ನು ವಿವಾಹವಾಗಿದ್ದ. ಮಕ್ಕಳಿಲ್ಲ ಎಂಬ ಕೊರಗಿನಿಂದ ಎಡಹಳ್ಳಿ ಬಳಿ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಶುಕ್ರವಾರ ಮನೆ ಬಿಟ್ಟಿದ್ದ ಲಕ್ಷ್ಮಣ್ ನಾಯಕ ನಿನ್ನೆ ಶವವಾಗಿ ಪತ್ತೆಯಾಗಿದ್ದಾನೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಆರ್.ವಿ, ಎಲ್.ಜಿ)

Leave a Reply

comments

Related Articles

error: