ಪ್ರಮುಖ ಸುದ್ದಿಮೈಸೂರು

ಮಳೆಗೆ ಮಗು ಬಲಿ

ಮೈಸೂರು, ಮೇ 29:  ಧಾರಾಕಾರ ಮಳೆಗೆ ಮಗುವೊಂದು ಬಲಿಯಾಗಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿರುವ ಮುನೇಶ್ವರ ನಗರದಲ್ಲಿ ನಡೆದಿದೆ.

ರೆಹಮಾನ್ ಖಾನ್ ಹಾಗೂ ಹಾಜಿರಾ ಬೇಗಂ ದಂಪತಿಯ ಎರಡು ವರ್ಷದ ಅಲೀನಾಖಾನ್ ಮೃತಪಟ್ಟಿರುವ ಮಗು. ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚರಂಡಿ ನೀರು ಮನೆಗೆ ನುಗ್ಗಿದೆ. ಮನೆಗೆ ತುಂಬಿದ್ದ ನೀರನ್ನು ಹೊರ ಹಾಕುವಾಗ ಮಗು ಚರಂಡಿ ನೀರು ಕುಡಿದಿದ್ದು,  ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದೆ ಎನ್ನಲಾಗಿದೆ.

ಈ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: