ಕರ್ನಾಟಕಪ್ರಮುಖ ಸುದ್ದಿ

ಸರ್ಕಾರ ನಿದ್ರೆಯಲ್ಲಿರುವುದರಿಂದ ತುಂಗಭದ್ರಾ ಡ್ಯಾಂನ ಹೂಳೆತ್ತುವ ಕಾರ್ಯವನ್ನು ರೈತರೇ ಮಾಡುತ್ತಿದ್ದಾರೆ : ಯಡಿಯೂರಪ್ಪ

ಪ್ರಮುಖಸುದ್ದಿ,ರಾಜ್ಯ(ಕೊಪ್ಪಳ) ಮೇ.29:- ಸರ್ಕಾರ ನಿದ್ರೆಯಲ್ಲಿರುವುದರಿಂದ ತುಂಗಭದ್ರಾ ಡ್ಯಾಂನಲ್ಲಿರುವ ಹೂಳನ್ನು  ರೈತರು ತೆಗೆಯುತ್ತಿದ್ದಾರೆ‌. ರಾಜ್ಯ ಸರ್ಕಾರದ ಯಾವೊಬ್ಬ ಸಚಿವರೂ ಹೂಳು ತಗೆಯುವ ಸ್ಥಳಕ್ಕೆ ಭೇಟಿ ನೀಡಿಲ್ಲ. ಭೀಕರ ಬರದಿಂದ ರಾಜ್ಯದ ಬಹುತೇಕ ಡ್ಯಾಂ, ಕೆರೆ ಕಟ್ಟೆಗಳು ಬತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಜನಸಂಪರ್ಕ ಅಭಿಯಾನ ಪ್ರಯುಕ್ತ ಕೊಪ್ಪಳಕ್ಕೆ ತೆರಳಿದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೇಂದ್ರ ಸರ್ಕಾರದಿಂದ ಬಂದಿರೋ ಅನುದಾನ ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಕಾಗೋಡ ತಿಮ್ಮಪ್ಪ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು. ಹಿರೇಬಗನಾಳ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯದ ಹಿಂದೆ ಶಾಸಕ ಶಿವರಾಜ್ ತಂಗಡಗಿ ಕುಮ್ಮಕ್ಕು ನೀಡಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿ ರಾಜಕೀಯ ಲಾಭ ಪಡೆಯಲು ತಂಗಡಗಿ ಈ ತಂತ್ರ ಮಾಡುತ್ತಿದ್ದಾರೆ. ಸೋಲುವ ಭೀತಿಯಿಂದ ತಂಗಡಗಿ ಶಾಂತಿ ಕದಡಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆ ಎಂದರೆ ಭ್ರಷ್ಟಾಚಾರ ದಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿರುವದು. ಕರ್ನಾಟಕ.ಪ್ರಾಮಾಣಿಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಲ್ಲಿ ರಕ್ಷಣೆ ಇಲ್ಲ. ಡಿಕೆ ರವಿ, ಅನುರಾಗ್ ತಿವಾರಿ, ಗಣಪತಿ  ಸಾವಿನ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ‌. ಬಿಬಿಎಂಪಿ ನಾಮಫಲಕ ಅಳವಡಿಕೆ ಯಲ್ಲಿ 2500 ಕೋಟಿ ಅವ್ಯವಹಾರವಾಗಿದೆ. ವರದಿ ನೀಡಿದ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ ಎಂದರು. ದಲಿತರ ಮನೆಯಲ್ಲಿ ಉಪಹಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಯಾಕೆ ಹೋಟೆಲ್ ಉಪಹಾರ ತಂದು ತಿನ್ನಲಿ.ಯಾರೋ ಅಯೋಗ್ಯರು ಮಾತನಾಡುತ್ತಾ ಇದ್ದರೆ  ನಾನ್ಯಾಕೆ ತಲೆಕೆಡಿಸಿಕೊಳ್ಳಿ. ನಮ್ಮ ಮನೆಯಲ್ಲಿ ಅಡುಗೆ ಮಾಡುವವರು ದಲಿತರೇ ಇದ್ದಾರೆ. ಅವರು ಅಡುಗೆ ಮಾಡಿದ್ದನೇ ನಮ್ಮ ಕುಟುಂಬ ದಿನಾಲು ಊಟ ಮಾಡುತ್ತಾರೆ ಎಂದು ತಿಳಿಸಿದರು.   ಈ ಸಂದರ್ಭ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: