ಸುದ್ದಿ ಸಂಕ್ಷಿಪ್ತ

ಅ.5: ಪದಗ್ರಹಣ ಕಾರ್ಯಕ್ರಮ

ಬಿಜೆಪಿ ಕೃಷ್ಣರಾಜ ಕ್ಷೇತ್ರದ ಸ್ಲಂ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅ. 5ರಂದು ಏರ್ಪಡಿಸಿರುವುದಾಗಿ ಅಧ್ಯಕ್ಷ ವೈ.ವೆಂಕಟೇಶ್ ತಿಳಿಸಿದರು.

ಅಂದು ಸಂಜೆ 4 ಗಂಟೆಗೆ ವಾರ್ಡ್-11ರ ನಾಗಮ್ಮ ನಾಗರಾಜು ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪದ ಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ಸ್ಲಂಮೋರ್ಚಾದ ರಾಜ್ಯಾಧ್ಯಕ್ಷ ಜಯಪ್ರಕಾಶ್.ಯು . ಅಂಬರ್‌ಕರ್, ಮಾಜಿ ಸಚಿವ ಎಸ್.ಎ. ರಾಮದಾಸ್,  ರಾಜ್ಯ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘು ಕೌಟಿಲ್ಯ ಮತ್ತಿತರರು ಆಗಮಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸೈನಿಕರು, ವೈದ್ಯರು, ಇಂಜಿನಿಯರ್, ವಕೀಲರು, ಉಪಾಧ್ಯಾಯರು, ಉನ್ನತ ವ್ಯಾಸಂಗ ನಿರತ ವಿದ್ಯಾರ್ಥಿಗಳು, ಸಿನಿಮಾ ರಂಗ ಮತ್ತಿತರ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಸನ್ಮಾನ, ಸೈನಿಕರ ಕಲ್ಯಾಣ ನಿಧಿ ಸಂಗ್ರಹ, ಕೃಷ್ಣರಾಜ ಕ್ಷೇತ್ರದ ಎಲ್ಲಾ ಸ್ಲಂಗಳಲ್ಲಿರುವ ಕಾಲೋನಿಯ ಯಜಮಾನರುಗಳು ಮತ್ತು ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ಆರ್.ರಮೇಶ್, ಹರ್ಷಕುಮಾರ್, ರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: