ಮೈಸೂರು

ಆರೋಗ್ಯ ಇಲಾಖೆಯ ಅಸಮರ್ಪಕ ಕಾರ್ಯವೈಖರಿ: ಅಧಿಕಾರಿಗಳ ತರಾಟೆ

ಮೈಸೂರು,ಮೇ.29;- ಕೆಲ ತಿಂಗಳುಗಳಿಂದ ಮುಂದೂಡುತ್ತಲೇ  ಬಂದಿದ್ದ  ನಂಜನಗೂಡು ತಾಲೂಕು ಪಂಚಾಯತ್ ನ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯು ಪಟ್ಟಣದ  ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು

ಶಾಸಕರು ತಡವಾಗಿ ಆಗಮಿಸಿದ್ದಕ್ಕಾಗಿ ಎರಡು ಗಂಟೆ ತಡವಾಗಿ ಆರಂಭಗೂಂಡ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ನೂತನ ಶಾಸಕ ಕಳಲೆ ಕೇಶವಮುರ್ತಿ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನ ವಿವಿಧ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಇಲಾಖಾವಾರು ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.

ಅಪೂರ್ಣ ಮಾಹಿತಿಗಳೊಂದಿಗೆ ಸಭೆಗೆ ಬಂದ ಅಧಿಕಾರಿಗಳ ವಿರುದ್ದ ಅಸಮಾಧಾನಗೊಂಡ ಜನಪ್ರತಿನಿಧಿಗಳು ಇದೇ ಸಂದರ್ಭ ಆರೋಗ್ಯ ಇಲಾಖೆಯ ಅಸಮರ್ಪಕ ಕಾರ್ಯವೈಖರಿಯನ್ನು ಪ್ರಶ್ನಿಸಿದರು. 108 ಆ್ಯಂಬುಲೆನ್ಸ್ ನವರು ರೋಗಿಗಳನ್ನು ಕಮಿಷನ್ ಗೆ  ಖಾಸಗಿ ಆಸ್ಪತ್ರೆಗೆ ತಲುಪಿಸುತ್ತಿದ್ದು ಮತ್ತು ಪಟ್ಟಣದ ಕೆಲ ಆಸ್ಪತ್ರೆಗಳು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿವೆ. ಇದೆಲ್ಲದರ ವಿರುದ್ದ ಕ್ರಮ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು. ಸಭೆಯಲ್ಲಿ ತಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: