ಸುದ್ದಿ ಸಂಕ್ಷಿಪ್ತ

ಜಾತ್ಯತೀತ ಸಮಾವೇಶ

ಅ.2 ರಿಂದ 8 ರವರೆಗೆ ಜಾತ್ಯತೀತತೆಯೇ ಭಾರತದ ಜೀವ. ಜಾತ್ಯತೀತತೆಯೇ ಇಂಡಿಯಾ ಅಸ್ತಿತ್ವಕ್ಕೆ ಅನಿವಾರ್ಯ ಎಂಬ ಅಧಿಕೃತ ಘೋಷವಾಕ್ಯದೊಂದಿಗೆ ಜಾತ್ಯತೀತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.

ಅ.೨ ರಂದು  ದೆಹಲಿಯಲ್ಲಿ ಸಮಾವೇಶ ಉದ್ಘಾಟನೆಗೊಂಡಿದ್ದು, ಅ.7 ರಂದು ನಗರದ ಉದಯಗಿರಿಯ ಸಫಾ ಫಂಕ್ಷನ್‌ಹಾಲ್‌ನಲ್ಲಿ  ಜಾತ್ಯತೀತ ಸಮಾವೇಶದ ಸಭೆಯನ್ನು ಏರ್ಪಡಿಸಲಾಗಿದೆ.  ಅದೇ ದಿನ ಹುಣಸೂರಿನಲ್ಲಿಯೂ ಸಭೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ಎಂ.ಎಫ್. ಖಲೀಂ, ಕಾರ್ಯದರ್ಶಿ ಕುಮಾರ ಸ್ವಾಮಿ, ಆಲೂರು ಮಲ್ಲಣ್ಣ ಉಪಸ್ಥಿತರಿದ್ದರು.

Leave a Reply

comments

Related Articles

error: