ಸುದ್ದಿ ಸಂಕ್ಷಿಪ್ತ

ಸಿ.ಬಿ.ಎಸ್.ಇ.ಯ ಹನ್ನೆರಡನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟ

ಮಡಿಕೇರಿ ಮೇ 29 :-2016-17ನೇ ಶೈಕ್ಷಣಿಕ ವರ್ಷದಲ್ಲಿ ಸಿ.ಬಿ.ಎಸ್.ಇ.ಯ ಹನ್ನೆರಡನೇ ತರಗತಿಯ ಪರೀಕ್ಷೆಯ ಫಲಿತಾಂಶದಲ್ಲಿ ಜವಾಹರ ನವೋದಯ ವಿದ್ಯಾಲಯ, ಗಾಳಿಬೀಡು, ಕೊಡಗು ಜಿಲ್ಲೆಯು ಶೇ.100 ಫಲಿತಾಂಶವನ್ನು ಪಡೆದಿದ್ದು ಪರೀಕ್ಷೆಯನ್ನು ತೆಗೆದುಕೊಂಡಿದ್ದ ಎಲ್ಲಾ 59 ವಿದ್ಯಾರ್ಥಿಗಳು ಮೊದಲನೇಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಇದರಲ್ಲಿ 45 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಭೂಮಿಕಾ ಹೆಗಡೆ ಶೇ.95.6, ಕುಮಾರಿ ಅಪೂರ್ವ ಕೆ.ಸಿ. ಶೇ.93.6, ಯಶವಂತ ಎಚ್.ಎಲ್. ಶೇ.93.2 ಅಂಕಗಳನ್ನು ಪಡೆದಿದ್ದು, ವಿದ್ಯಾಲಯದ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಹಾಗೂ ವೃತ್ತಿಪರ ಶಿಕ್ಷಣ ವಿಭಾಗದಲ್ಲಿ ಕುಮಾರಿ ಲಿವಿನ್ ಕೆ.ಸಿ. ಶೇ.92, ಕುಮಾರಿ ವಿನ್ಸಿ ಬಿ.ಡಿ. ಶೇ.91.8, ಕುಮಾರಿ ಸುಶ್ಮಿತಾ ಎಂ.ಕೆ.ಶೇ.91.6 ಅಂಕಗಳೊಂದಿಗೆ ಶಾಲೆಯ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ. (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: