ಸುದ್ದಿ ಸಂಕ್ಷಿಪ್ತ

ನವೆಂಬರ್ 17: ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಹನ್ನೊಂದು ವರ್ಷಗಳಿಂದ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಬಾರಿಯು 2016ರ ರಮಣಶ್ರೀ  ಶರಣ ಪ್ರಶಸ್ತಿಯನ್ನು ನೀಡಲು ಪರಿಷತ್ ನಿರ್ಧರಿಸಿದ್ದು, ಶರಣ ಸಾಹಿತ್ಯ ಸಂಶೋಧನೆಯಲ್ಲಿ ಡಾ.ಮ.ನ.ಜವರಯ್ಯ ಮೈಸೂರು, ವಚನಕಾರ ಡಾ.ಬಸವರಾಜ ಸಿದ್ಧಾಶ್ರಮ, ವಚನ ಸಂಗೀತದಲ್ಲಿ ಸಂಗೀತಾ ಕಟ್ಟಿ ಕುಲಕರ್ಣಿ, ಸೇವಾಸಂಸ್ಥೆಯ ಅಕ್ಕಮಹಾದೇವಿ ಸಮಿತಿ ಉಡುತಡಿ ಅವರಿಗೆ ನೀಡಲಾಗುತ್ತಿದೆ. ಕಾರ್ಯಕ್ರಮವು ನವೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಶಸ್ತಿಯು 25ಸಾವಿರ ಗೌರವಧನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

Leave a Reply

comments

Related Articles

error: