ಕರ್ನಾಟಕಪ್ರಮುಖ ಸುದ್ದಿ

ಕೆಜಿಎಫ್ ಬೆಮೆಲ್ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಕೋಲಾರ ಬಂದ್

ರಾಜ್ಯ, (ಕೋಲಾರ) ಮೇ 30: ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಕೋಲಾರದ  ಕೆಜಿಎಫ್ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಕೋಲಾರ ಜಿಲ್ಲಾ‌ ಬಂದ್ ಗೆ ಮಂಗಳವಾರ ಕರೆ ನೀಡಲಾಯಿತು.

ಕೋಲಾರ ನಗರದ ಬಸ್ ಡಿಪೋ ಮುಂದೆ ವಿವಿಧ ಸಂಘಟನೆಗಳು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಸಿಐಟಿಯು, ಸಿಪಿಎಂ, ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಬಂದ್ ನ ಕುರಿತು ನಿನ್ನೆ ಘೋಷಣೆಯಾಗಿದ್ದರೂ ಬಸ್ ಸಂಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಇಂದು ಕೋಲಾರ ಜಿಲ್ಲಾ ಬಂದ್ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿ ತ್ರಿಲೋಕ ಚಂದ್ರ  ಜಿಲ್ಲೆಯಲ್ಲಿ  ಶಾಲಾ-ಕಾಲೇಜುಗಳಿಗೆ  ರಜೆ ಘೋಷಿಸಿದರು. ಸರ್ಕಾರಿ ಕಚೇರಿಗಳು ಸಹ ಬಂದ್ ಆಗಿರುತ್ತವೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ  ಆರು ತಾಲೂಕು  ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತ ಬಂದ್ ಆಗಿದೆ. ಜಿಲ್ಲೆಯಲ್ಲಿ  ಖಾಸಗಿ  ಹಾಗೂ ಸಾರಿಗೆ ಬಸ್ಸುಗಳ ಸಂಚಾರವಿಲ್ಲ.

ಸಿಐಟಿಯು ಸಂಘಟನೆಯ ಕಾರ್ಯಕರ್ತರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ಸಹ ಬೆಂಬಲ ವ್ಯಕ್ತ ಪಡಿಸಿದ್ದಾರೆ. ನಗರದಲ್ಲಿ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.  ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೂ ಗಲಾಟೆ ನಡೆಯದಂತೆ ಜಿಲ್ಲಾಧಿಕಾರಿ ಎಚ್ಚರ ವಹಿಸಿದ್ದಾರೆ. (ವರದಿ: ಎಸ್.ಎನ್, ಎಲ್.ಜಿ )

Leave a Reply

comments

Related Articles

error: