ಮೈಸೂರು

ಕಡತಗಳನ್ನು ರಕ್ಷಿಸಲು ಬೀಗ ಹಾಕಿಸಿದ್ದೇನೆ : ಮಾನೆ ಸ್ಪಷ್ಟನೆ

ಮೈಸೂರು,ಮೇ.30:- 120 ಮಂದಿ ನೇಮಕದಲ್ಲಿನ ಅಕ್ರಮದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಕಡತಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿರುವುದರಿಂದ ಬೀಗ ಹಾಕಿಸಿದ್ದೇನೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ವಿಚಾರಣಾ ಸಮಿತಿ ಬರುವ ತನಕ ಕಡತಗಳನ್ನ ರಕ್ಷಿಸುವುದು ನಮ್ಮ ಜವಾಬ್ದಾರಿ, ಹಾಗಾಗಿ ಡೆಪ್ಯೂಟಿ ರಿಜಿಸ್ಟ್ರಾರ್ ಕಚೇರಿಗೆ ಬೀಗ ಹಾಕಿಸಿದ್ದೇನೆ. ವಿವಿ ಬೋಧಕೇತರ ಸಿಬ್ಬಂದಿ ವೇತನ ತಡೆ ಹಿಡಿದಿಲ್ಲ, ನಾನು ಆದೇಶ ಮಾಡಿದ್ದರೂ1.25 ಕೋಟಿ ರೂ. ಬಿಡುಗಡೆ ಮಾಡಿಲ್ಲ, ನನ್ನ ಯಾವುದೇ ಆದೇಶವನ್ನ ರಿಜಿಸ್ಟ್ರಾರ್ ಪಾಲಿಸುತ್ತಿಲ್ಲ. ವಿವಿಯಲ್ಲಿ ಕೆಲವರಿಗೆ ಅಹಂ, ಇಗೋಗಳಿವೆ, ಅದರಿಂದಾಗಿ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಎಂದಿದ್ದಾರೆ. (ವರದಿ:ಆರ್.ವಿ,ಎಸ್.ಎಚ್)

Leave a Reply

comments

Related Articles

error: