ಮೈಸೂರು

ಮನಸೂರೆಗೊಂಡ ಮಹಿಳಾ ವಾದ್ಯಗೋಷ್ಠಿ

ಮೈಸೂರು ದಸರಾ ಉತ್ಸವ ಭರ್ಜರಿಯಾಗಿಯೇ ನಡೆಯುತ್ತಿದೆ. ನಾಲ್ಕನೆಯ ದಿನವಾದ ಮಂಗಳವಾರ ಜಗನ್ಮೋಹನ ಅರಮನೆಯಲ್ಲಿ ಮಹಿಳಾ ವಾದ್ಯ ಗೋಷ್ಠಿ ನಡೆಯಿತು.

ದಾವಣಗೆರೆಯ ಹರಿಹರ ತಾಲೂಕಿನ ಚೌಡೇಶ್ವರಿ ಮಹಿಳಾ ಸಂಘದವರು ನಡೆಸಿಕೊಟ್ಟ ವಾದ್ಯ ಗೋಷ್ಠಿಯಲ್ಲಿ ತಮಟೆ ವಾದನ ಪ್ರೇಕ್ಷಕರ ಮನಗೆದ್ದಿತು. ಇದರ ಜೊತೆ ಕೀಲು ಕುದುರೆ  ಮೂಲಕ  ಡಾ.ರಾಜಕುಮಾರ್ ಅವರ ಗೀತೆಗೆ ಕಲಾವಿದರು ನೃತ್ಯ  ಪ್ರದರ್ಶಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಬಸವರಾಜು ಮಹಿಳಾ ವಾದ್ಯಗೋಷ್ಠಿಯನ್ನು ನಿರ್ದೇಶಿಸಿದ್ದರಲ್ಲದೇ ಕೀಲು ಕುದುರೆಯಾಗಿ ನೃತ್ಯ ಪ್ರದರ್ಶಿಸಿದರು ಇವರಿಗೆ ಮಹಿಳಾ ಕೀಲು ಕುದುರೆಯಾಗಿ ಕಲಾವಿದ ಗಣೇಶ್ ಸಾಥ್ ನೀಡಿದರು. ತಮಟೆ ನೃತ್ಯ ಪ್ರದರ್ಶನಕ್ಕೆ ದಸರಾ ಉಪ ಸಮಿತಿ ವತಿಯಿಂದ ಪ್ರಶಸ್ತಿ ಪತ್ರ ಮತ್ತು ಚೆಕ್ ನೀಡಿ ಗೌರವಿಸಲಾಯಿತು.

Leave a Reply

comments

Related Articles

error: