ದೇಶಪ್ರಮುಖ ಸುದ್ದಿ

ಸಹೋದ್ಯೋಗಿ ನೀರಿನಲ್ಲಿ ಮುಳುಗುವುದನ್ನು ತಪ್ಪಿಸಲು ಹೋದ ಟ್ರೈನಿ ಐಎಎಸ್ ಆಫೀಸರ್ ಸಾವು

ಪ್ರಮುಖಸುದ್ದಿ,ದೇಶ(ನವದೆಹಲಿ) ಮೇ.30:- ಟ್ರೈನಿ ಐಎಎಸ್ ಆಫೀಸರ್ ಓರ್ವರು ಮಹಿಳಾ ಸಹೋದ್ಯೋಗಿ ಈಜುಕೊಳದಲ್ಲಿ ಮುಳುಗುವುದನ್ನು ತಪ್ಪಿಸಲು ಹೋಗಿ ತಾವೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಐಎಎಸ್ ಆಶೀಷ್ ದಹಿಯಾ(30) ಎಂದು ಹೇಳಲಾಗಿದೆ. ಬೆರ್ ಸರಾಯ್ ದಲ್ಲಿರುವ ಫಾರೆನ್ ಸರ್ವೀಸ್ ಇನ್ಸಟಿಟ್ಯೂಟ್ ನಲ್ಲಿ ಸೋಮವಾರ ಪಾರ್ಟಿ ಏರ್ಪಡಿಸಲಾಗಿತ್ತು. ಇದರಲ್ಲಿ ಐಎಎಸ್,ಐಎಫ್ ಎಸ್, ಐಆರ್ ಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಟ್ರೈನಿ ಅಧಿಕಾರಿಗಳ ಹೇಳಿಕೆಯನುಸಾರ ಪಾರ್ಟಿಯಲ್ಲಿ ಈಜುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಓರ್ವ ಮಹಿಳಾ ಅಧಿಕಾರಿ ಈಜಲು ಹೋಗಿ ಮುಳುಗತೊಡಗಿದರು. ಅವರನ್ನು ರಕ್ಷಿಸಲು ಆಶೀಷ್ ಸಹಿತ ಹಲವು ಅಧಿಕಾರಿಗಳು ತೆರಳಿದ್ದರು.  ಮಹಿಳಾ ಅಧಿಕಾರಿಯನ್ನು ರಕ್ಷಿಸಲಾಯಿತು. ಆದರೆ ಕೊಳದಲ್ಲಿ ಆಶೀಷ್ ಯಾರಿಗೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಅವರ ಶರೀರವು ನೀರಿನ ಮೇಲೆ ತೇಲತೊಡಗಿತು. ಎಲ್ಲರೂ ಸೇರಿ ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದಿದ್ದಾರೆ. (ವರದಿ:ಎಸ್.ಎಚ್)

Leave a Reply

comments

Related Articles

error: